ಬಹಿರ್ದೆಸೆಗೆ ತೆರಳಿದವನ ಮೇಲೆ ಬಂದೆರಗಿದ ಕರಡಿ

ಈ ಸುದ್ದಿಯನ್ನು ಶೇರ್ ಮಾಡಿ

Bear-In

ತುಮಕೂರು, ಏ.6- ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಬಳಿ ದೇವಯ್ಯನಹಟ್ಟಿ ಗ್ರಾಮದ ಚನ್ನೇಗೌಡ ಎಂಬುವರು ರಾತ್ರಿ 10.30ರಲ್ಲಿ ಬಹಿರ್ದೆಸೆಗೆ ತೆರಳಿದ್ದಾಗ, ಆಹಾರ ಅರಸಿ ಬಂದಿದ್ದ ಕರಡಿ ಏಕಾಏಕಿ ದಾಳಿ ಮಾಡಿದೆ.

ಚನ್ನೇಗೌಡ ಸಹಾಯಕ್ಕಾಗಿ ಕೂಡಿಕೊಂಡಿದ್ದು, ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಬಂದು ಕರಡಿಯನ್ನು ಓಡಿಸಿ ಗಾಯಗೊಂಡಿದ್ದ ಚನ್ನೇಗೌಡ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಭಾಗದಲ್ಲಿ ಕರಡಿಗಳ ಹವಾಳಿ ಹೆಚ್ಚಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಕರಡಿ ಹಿಡಿಯುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.   ಚಿಕ್ಕವರು-ದೊಡ್ಡವರು ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗಿದೆ. ಯಾವ ಗಳಿಗೆಯಲ್ಲಿ ಕರಡಿ ತಮ್ಮ ಮೇಲೆ ದಾಳಿ ಮಾಡುವುದೋ ಎಂಬ ಭಯದಲ್ಲೇ ಗ್ರಾಮಸ್ಥರು ಜೀವನ ನಡೆಸುವಂತಾಗಿರುವುದು ವಿಪರ್ಯಾಸ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin