ಮನೆಗಳ್ಳರ ಬಂಧನ : 3.5 ಲಕ್ಷ ಮೌಲ್ಯದ ಆಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಏ.6- ಬೇಲೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಒಂಟಿ ಮನೆಗಳಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವೃತ್ತ ನಿರೀಕ್ಷಕ ಲೋಕೇಶ್ ಹೇಳಿದರು.
ಮನೆಗಳ್ಳರಾದ ಹಾಸನ ನಗರದ ಸಂತೇ ಪೇಟೆಯ ಜೈನುಲ್ಲ ಶರೀಫ್, ಹಾಗೂ ಹೊಳೆನರಸೀಪುರದ ಜಗಧೀಶ್ ಬಂಧಿತ ಆರೋಪಿಗಳು.
ಅವರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಆರಕ್ಷಕ ಅಧೀಕ್ಷಕರು ಹಾಗೂ ಜಿಲ್ಲಾ ಹೆಚ್ಚುವರಿ ಆರಕ್ಷಕ ಅಧೀಕ್ಷಕರು, ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ತಾಲೂಕಿನ ವಿವಿಧ ಭಾಗಗಳ ಗ್ರಾಮಗಳಲ್ಲಿನ ಮನೆಗಳಲ್ಲಿ ಕಳ್ಳತನ ಮಾಡಿರುವ ಈ ಇಬ್ಬರನ್ನು ಉನ್ನತಾಧಿಕಾರಿಗಳ

ಮಾರ್ಗದರ್ಶನದಂತೆ ಬೇಲೂರು ಪಿಎಸ್‍ಐ ಬಾಲು, ಹಳೇಬೀಡು ಪಿಎಸ್‍ಐ ರೇಣುಕಾಪ್ರಸಾದ್, ಎಎಸ್‍ಐ ಮಲ್ಲೇಶ್ ಸಿಬ್ಬಂದಿಗಳಾದ ಜಮ್ರುದ್ದೀನ್ ಖಾನ್, ತಾಂಡವೇಶ್ವರ್, ರವೀಶ್, ರಘು, ಚಾಲಕ ಉಮಾಶಂಖರ್ ತಂಡದೊಂದಿಗೆ ಖಚಿತ ಮಾಹಿತಿ ಮೇರೆಗೆ ಬೇಲೂರು ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.ಆರೋಪಿಗಳಿಂದ ಬೇಲೂರು ಹಾಗೂ ಹಳೇಬೀಡು ಪೊಲೀಸ್ ಠಾಣೆಗಳಲ್ಲಿನ 8 ಕಳವು ಪ್ರಕರಣಗಳಲ್ಲಿ ಒಟ್ಟು 3.5 ಲಕ್ಷ ಮೌಲ್ಯದ 120 ಗ್ರಾಂ ಒಡವೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದರು.ಪಿಎಸ್‍ಐಗಳಾದ ಬಾಲು, ರೇಣುಕಾಪ್ರಸಾದ್, ಎಎಸ್‍ಐ ಮಲ್ಲೇಶ್ ಸಿಬ್ಬಂದಿಗಳಾದ ಜಮ್ರುದ್ದೀನ್ ಖಾನ್, ತಾಂಡವೇಶ್ವರ್, ಧರ್ಮಯ್ಯ, ರವೀಶ್, ರಘು, ಚಾಲಕ ಉಮಾಶಂಖರ್ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin