ಬಿಬಿಎಂಪಿ ಪೌರಕಾರ್ಮಿಕರಿಗೆ ತಿನ್ನಲು ಯೋಗ್ಯವಲ್ಲದ ಊಟ ನೀಡುತ್ತಿದೆ ಇಸ್ಕಾನ್

ಈ ಸುದ್ದಿಯನ್ನು ಶೇರ್ ಮಾಡಿ

BBMP-Meals

ಬೆಂಗಳೂರು, ಏ.7- ನಗರದ ಪೌರ ಕಾರ್ಮಿಕರಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿ ಊಟ ತಿನ್ನಲು ಯೋಗ್ಯ ಅಲ್ಲ ಎಂದು ಆಹಾರ ತಜ್ಞರ ವರದಿ ದೃಢಪಡಿಸಿದೆ. ಕಳೆದ ಮಾರ್ಚ್ 27ರಂದು ಧರ್ಮರಾಯ ಸ್ವಾಮಿ ವಾರ್ಡ್‍ನಲ್ಲಿ ಪೌರ ಕಾರ್ಮಿಕರಿಗೆ ಇಸ್ಕಾನ್ ಸಂಸ್ಥೆ ಹಳಸಿದ ಅನ್ನ ನೀಡಿತ್ತೆಂದು ಬಿಬಿಎಂಸಿ ಸದಸ್ಯೆ ಪ್ರತಿಭಾ ಧನರಾಜ್ ಆರೋಪಿಸಿದ್ದರು. ಅಲ್ಲದೆ ಅನ್ನವನ್ನು ಪಾಲಿಕೆ ಸಭೆಗೆ ತಂದು ಪ್ರದರ್ಶಿಸಿ ಇಸ್ಕಾನ್ ಕಳಪೆ ಊಟ ನೀಡುತ್ತಿದೆ ಎಂದು ಗಮನ ಹರಿಸಿದ್ದರು.
sgsgfsfs1

ಹಾಗಾಗಿ ಮೇಯರ್ ಜಿ.ಪದ್ಮಾವತಿ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಹಳಸಿದ ಅನ್ನವನ್ನು ಪರೀಕ್ಷಿಸಿದ ಪಬ್ಲಿಕ್ ಹೆಲ್ತ್ ಇನ್‍ಸ್ಟಿಟಿಟ್ಯೂಟ್ ಸಂಸ್ಥೆಯ ಮೈಕ್ರೋ ಬಯಾಲಜಿಸ್ಟ್‍ಗಳು ಇಸ್ಕಾನ್ ಊಟ ತಿನ್ನಲು ಯೋಗ್ಯವಲ್ಲ ಎಂದು ವರದಿ ನೀಡಿದೆ. ಹಾಗಾಗಿ ಇನ್ನು ಮುಂದೆ ಇಸ್ಕಾನ್ ಸಂಸ್ಥೆ ನೀಡುವ ಊಟದ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಏನು ಕ್ರಮ ಕೈಗೊಳ್ಳಬೇಕೆಂಬ ನಿರ್ಧಾರ ನೀಡುತ್ತೇವೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

sgsgfsfs

Facebook Comments

Sri Raghav

Admin