ಮೂರನೇ ದಿನವೂ ಶ್ರೀನಗರ-ಜಮ್ಮು ಹೆದ್ದಾರಿ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Srinagar--01

ಶ್ರೀನಗರ, ಏ.7- ಕಳೆದೆರಡು ದಿನಗಳಿಂದ ಕಣಿವೆ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನೂ ಮೂರನೇ ದಿನವೂ ಬಂದ್ ಮಾಡಲಾಗಿದೆ. ಇದರಿಂದ ಕಾಶ್ಮೀರದಿಂದ ದೇಶದ ಇತರೆ ಪ್ರದೇಶಗಳ ಸಂಚಾರದಲ್ಲಿ ವ್ಯತ್ಯೆಯ ಉಂಟಾಗಿದೆ.  ಭಾರೀ ಮಳೆಯಿಂದಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಮೇಲೆ ಮಣ್ಣು ಕುಸಿದು ಬಿದ್ದಿದ್ದು, ಜತೆಗೆ ಬೃಹತ್ ಗಾತ್ರದ ಕಲ್ಲುಗಳು ಕೂಡ ರಸ್ತೆಗೆ ಬಿದ್ದು ಓಡೆದು ಸಂಚಾರಕ್ಕೆ ಅಡ್ಡವಾಗಿ ಪರಿಣಮಿಸಿದೆ ಎಂದು ಸಂಚಾರಿ ನಿಯಂತ್ರಣ ಕೊಠಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮಣ್ಣು ಮತ್ತು ಕಲ್ಲುಗಳು ರಸ್ತೆಯ ಮೇಲೆ ಕುಸಿದು ಬಿದ್ದಿದ್ದರಿಂದ ದಿಗ್‍ಡಾಲ್, ಸೇರಿ, ಗಾಂಗ್ರೋ, ಪಂಥ್ಯಾಲ್ ಮತ್ತು ರಾಮ್ಸೊ ಮುಂತಾದ ಪ್ರದೇಶಗಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಸದ್ಯ ವಾತಾವರಣ ಅನಾನೂಕೂಲತೆಯಿಂದ ರಸ್ತೆ ನವೀಕರಣ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಸಂಚಾರಿ ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin