ಶಿಷ್ಟಾಚಾರ ಬದಿಗೊತ್ತಿ ಬಾಂಗ್ಲಾ ಪ್ರಧಾನಿಗೆ ಸ್ವಾಗತ ಕೋರಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಬೆಂಗಳೂರು, ಏ.7- ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಾಂಗ್ಲಾದೇಶದ ತಮ್ಮ ಸಹವರ್ತಿ ಶೇಖ್ ಹಸೀನಾ ಅವರನ್ನು ಖುದ್ದು ಸ್ವಾಗತಿಸಿ ಗಮನ ಸೆಳೆದಿದ್ದಾರೆ. ಯಾವುದೇ ಮಾರ್ಗಗಳ ನಿರ್ಬಂಧವಿಲ್ಲದೆ ಸಾಮಾನ್ಯ ವಾಹನ ಸಂಚಾರದ ನಡುವೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವತಃ ತೆರಳಿದ ಮೋದಿ, ನಾಲ್ಕು ದಿನಗಳ ಭಾರತ ಭೇಟಿಗಾಗಿ ಆಗಮಿಸಿರುವ ಹಸೀನರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಏಳು ವರ್ಷಗಳ ನಂತರ ಭಾರತಕ್ಕೆ ಆಗಮಿಸಿರುವ ಹಸೀನಾ ನಾಳೆ ಮೋದಿ ಅವರೊಂದಿಗೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ರಕ್ಷಣೆ, ನಾಗರಿಕ ಪರಮಾಣು ಸಹಕಾರ ಸೇರಿದಂತೆ ಅನೇಕ ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ-ಬಾಂಗ್ಲಾ 25ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin