ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ-ಆರ್ಸಿಬಿ ಪಂದ್ಯ , ಬಂದೋಬಸ್ತ್’ಗೆ 1500 ಪೊಲೀಸರ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Police--025

ಬೆಂಗಳೂರು, ಏ.8- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಡೆಲ್ಲಿ ಡೇರ್ ಡೆವಿಲ್ಸ್-ಬೆಂಗಳೂರು ರಾಯಲ್ ಚಾಲೆಂಜರ್ಸ್ ನಡುವೆ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಕ್ರೀಡಾಂಗಣದ ಸುತ್ತಮುತ್ತ ಬಂದೋಬಸ್ತ್ ಗಾಗಿ 1500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯ ಜಾಲೀಸರ ಜತೆಗೆ ಪಿಯುಆರ್‍ಟಿ ಪಡೆ, ಗರುಡ ಪಡೆ, ಕೆಎಸ್‍ಆರ್‍ಪಿಯ 4 ತುಕಡಿಗಳನ್ನು ನೇಮಿಸಲಾಗಿದೆ.  ಬಂದೋಬಸ್ತ್‍ನಲ್ಲಿ ಒಬ್ಬರು ಹೆಚ್ಚುವರಿ ಜಾಲೀಸ್ ಆಯುಕ್ತರು, ಇಬ್ಬರು ಡಿಸಿಪಿಗಳು, 11 ಮಂದಿ ಎಸಿಪಿ, 34 ಇನ್ಸ್‍ಪೆಕ್ಟರ್‍ಗಳು, 86 ಎಸ್‍ಐಗಳನ್ನು ನಿಯೋಜಿಸಲಾಗಿದ್ದು, ಕ್ರೀಡಾಂಗಣದ ಸುತ್ತ 130ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸುವವರು ಹೆಲ್ಮೆಟ್, ನೀರಿನ ಬಾಟಲ್, ತಿಂಡಿ-ತಿನಿಸು, ಕರಪತ್ರಗಳು, ಲ್ಯಾಪ್‍ಟಾಪ್, ಕ್ಯಾಮೆರಾ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin