ಪ್ರಥಮ್ ಆರೋಗ್ಯವಾಗಿದ್ದಾನೆ, ಅವನಿಗೆ ತಪ್ಪಿನ ಅರಿವಾಗಿದೆ : ಕೀರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Pratha--02

ಬೆಂಗಳೂರು, ಏ.8- ಪ್ರಥಮ್ ಆರೋಗ್ಯವಾಗಿದ್ದಾರೆ. ಇನ್ನೆರಡು ದಿನಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಗ್‍ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಹೇಳಿದ್ದಾರೆ. ಐಸಿಯುನಿಂದ ಸ್ಪೆಷಲ್ ವಾರ್ಡ್‍ಗೆ ವರ್ಗಾವಣೆಯಾಗಿರುವ ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.  ಪ್ರಥಮ್‍ಗೆ ತಪ್ಪಿನ ಅರಿವಾಗಿದೆ. ಆದಷ್ಟು ಬೇಗ ಪ್ರಥಮ್ ಹಿಂದಿನಂತಾಗುತ್ತಾನೆ ಎಂದು ಹೇಳಿರುವ ಅವರು, ಇನ್ನೂ ಎರಡು-ಮೂರು ದಿನಗಳ ಕಾಲ ಹೊರಗೆ ಬರುವುದು ಬೇಡ. ಆತನಿಗೆ ವಿಶ್ರಾಂತಿ ಅಗತ್ಯವಿದೆ ಎಂದರು.

ವೈಯಕ್ತಿಕ ಕಾರಣಗಳಿಂದ ಕೆಲ ವಿಷಯಗಳು ನಡೆದಿವೆ. ಸಂಜನಾ ವಿಷಯದಲ್ಲಿ ಕೆಲವೊಂದು ಇಲ್ಲಸಲ್ಲದ ಆರೋಪಗಳು ಕೇಳಿಬಂದಿವೆ. ಈ ಎಲ್ಲ ವಿಷಯಗಳಿಗೂ ಪ್ರಥಮ್ ಹೊರಬಂದು ಉತ್ತರ ನೀಡುತ್ತಾನೆ. ಸದ್ಯ ನನ್ನ ಜತೆ ಕೇವಲ 10 ನಿಮಿಷಗಳು ಮಾತ್ರ ಮಾತನಾಡಿದ್ದಾನೆ ಎಂದರು.  ಪ್ರಥಮ್ ಈಗ ಸಹಜ ಸ್ಥಿತಿಯಲ್ಲಿದ್ದು, ನನ್ನ ಜತೆ ಮಾತನಾಡಿದ್ದಾನೆ. ಆತನಿಗೆ ಮೊಬೈಲ್ ಕೊಡದೆ ಸಂಪರ್ಕ ಕಡಿತ ಮಾಡಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಬಳಿಕ ಎಲ್ಲ ವಿಚಾರ ಮಾತನಾಡಲಿದ್ದಾನೆ. ಅದು ಸಹ ಯಾವ ಫ್ಲಾಟ್‍ಫಾರ್ಮ್ (ಫೇಸ್‍ಬುಕ್)ನಲ್ಲಿ ಆತ ಹೀಗೆ ಮಾಡಿಕೊಂಡನೋ ಅದೇ ಫ್ಲಾಟ್‍ಫಾರ್ಮ್‍ನಲ್ಲೇ ಎಲ್ಲರಿಗೂ ಉತ್ತರ ನೀಡುತ್ತಾನೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin