ಮಂಗಳೂರಲ್ಲಿ ತಂದೆಯ ಉತ್ತರಕ್ರಿಯೆ ನಡೆಸಿದ ಐಶ್ವರ್ಯ

ಈ ಸುದ್ದಿಯನ್ನು ಶೇರ್ ಮಾಡಿ

Aishwarya-Rai

ಮಂಗಳೂರು,ಏ.8- ತಂದೆಯ ಅಸ್ಥಿ ವಿಸರ್ಜನೆ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಇಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿ ತಂದೆ ಉತ್ತರ ಕ್ರಿಯೆ ಪಾಲ್ಗೊಂಡರು.   ಉಪ್ಪಿನಂಗಡಿಯ ಸಂಗಮ ಕ್ಷೇತ್ರದ ಸಹಸ್ರ ಲಿಂಗೇಶ್ವರ ದೇಗುಲದ ನೇತ್ರಾವತಿ ಕುಮಾರಧಾರೆ ನದಿಯಲ್ಲಿ ಐಶ್ವರ್ಯ ಅವರು ತಮ್ಮ ತಂದೆ ಕೃಷ್ಣ ರೈ ಅವರ ಅಸ್ತಿ ವಿಸರ್ಜನೆ ನೆರವೇರಿಸಿದರು.   ಕಳೆದ ವಾರವಷ್ಟೇ ಮುಂಬೈಯಲ್ಲಿ ಅನಾರೋಗ್ಯದಿಂದ ಕೃಷ್ಣ ರೈ ನಿಧನ ಹೊಂದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin