ಕಾಡಾನೆಗಳ ದಾಳಿ : ಅಪಾರ ಬೆಳೆ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

dabaspete
ದಾಬಸ್‍ಪೇಟೆ, ಏ.9- ಸೋಂಪುರ ಹೋಬಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ತುಮಕೂರು ಗಡಿ ಭಾಗವಾದ ಹಳೇ ನಿಜಗಲ್ ಗ್ರಾಮದಲ್ಲಿ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶ ಮಾಡಿದೆ.ಘಟನೆಯಲ್ಲಿ ಹಳೇನಿಜಗಲ್ ಗ್ರಾಮದ ರೈತ ಕುಮಾರ್ ತೋಟದಲ್ಲಿ 20 ತೆಂಗು, ರಾಗಿ, ಟೊಮ್ಯಾಟೋ ಮತ್ತು ಹೂವಿನ ಗಿಡಗಳನ್ನು ನಾಶ ಮಾಡಿವೆ. ಈ ದಾಳಿಂದಯಿಂದ ಸುಮಾರು 5 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ ಎನ್ನಲಾಗಿದೆ.
ಉಪ ಅರಣ್ಯಾಧಿಕಾರಿ ಸಿದ್ದರಾಜು ಹಳೇನಿಜಗಲ್ ಗ್ರಾಮದ ರೈತರ ಬೆಳೆಗಳ ದಾಳಿಯ ಕುರಿತು ನಷ್ಟದ ಪರಿಶೀಲನೆ ನಡೆಸಿ ಬೆಳೆ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಕಾಡಾನೆಗಳು ಒಂದೊಂದು ದಿನ ಒಂದು ಗ್ರಾಮದ ಮೇಲೆ ದಾಳಿ ನಡೆಸುತ್ತಿರುವುದರಿಂದ ಜನ ಭಯಗೊಂಡಿದ್ದಾರೆ.ಸೋಂಪುರ ಹೋಬಳಿಯಲ್ಲಿ ಕಳೆದ ಹತ್ತು ವರ್ಷದಿಂದಲೂ ಕಾಡಾನೆಗಳು ಮತ್ತು ಚಿರತೆ ದಾಳಿ ನಿರಂತರವಾಗಿ ನಡೆಯುತ್ತಲೆ ಇದ್ದು, ಸಾಕಷ್ಟು ಸಾಕು ಪ್ರಾಣಿಗಳನ್ನು ರೈತರು ಕಳೆದುಕೊಂಡಿದ್ದಾರೆ. ಸಾಕಷ್ಟು ಪ್ರಮಾಣದ ಬೆಳೆ ಮತ್ತು ಆಸ್ತಿ ನಷ್ಟವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದೆ ಮತ್ತಷ್ಟು ನಷ್ಟ ಇಲ್ಲವೆ ಪ್ರಾಣ ಹಾನಿಯಾಗುತ್ತದೆ ಎಂದು ಜಿಪಂ ಸದಸ್ಯ ನಂಜುಂಡಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin