ಜನ, ಜಾನುವಾರುಗಳ ರಕ್ಷಣೆಗೆ ತಾಲೂಕು ಆಡಳಿತ ವಿಫಲ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

FARMERS
ಕುಂದಗೋಳ,ಏ.9- ರಾಜ್ಯದಲ್ಲಿ ತೀವ್ರ ಬರಗಾಲದಿಂದ ಸಂಕಷ್ಟ ಕ್ಕೀಡಾಗಿರುವ ಜನ, ಜಾನುವಾರುಗಳ ರಕ್ಷಣೆಗೆ ತಾಲೂಕು ಆಡಳಿತ ಯಾವುದೇ ಕ್ರಮ ಜರುಗಿಸಿಲ್ಲವೆಂದು ಪಟ್ಟಣದ ಗಾಳಿಮರೆಮ್ಮ ದೇವಸ್ಥಾನದ ಮುಂಭಾಗವಾದ ಹುಬ್ಬಳ್ಳಿ-ಲಕ್ಮೇಶ್ವರ ರಸ್ತೆ ತಡೆದು ಪ್ರತಿಭಟಿಸಿ ತಹಶೀಲ್ದಾರ್ ಕಚೇರಿಯವರಿಗೆ ಪಾದಯಾತ್ರೆ ತೆರಳಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಭಾರತೀಯ ಕೃಷಿಕ ಸಮಾಜ ನವದೆಹಲಿ ರೈತ ಸಂಘಟನಾ ಕಾರ್ಯಕರ್ತ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ರಸ್ತೆ ತಡೆದಿದ್ದರಿಂದ ಕೆಲ ಘಂಟೆಗಳ ಕಾಲ ಬಿಗಿವಿನ ವಾತವರಣ ಉಂಟಾಗಿತ್ತು. ಸರ್ಕಾರಕ್ಕೆ ವಿವಿಧ ಬೇಡಿಕೆ ಕುರಿತು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾ ಯುವ ಅಧ್ಯಕ್ಷ ಬರಮ್ಮ ಗೌಡ ದ್ಯಾಮನಗೌಡ್ರ ಮಾತನಾಡಿ, ಗ್ರಾಮಗಳಿಗೆ ಯಾವುದೇ ಅಧಿಕಾರಿಗಳು ಭೈೀಟಿ ನೀಡಿ ವಸ್ತುಸ್ಥಿತಿ ಅರಿಯದೆ ತಮ್ಮ ಬೇಜಾವಾಬ್ದಾರಿ ತೋರಿಸಿ ಆಡಳಿತ ಪಕ್ಷಗಳ ಅವಧಿ ಮುಗಿಯುತ್ತಾ ಬಂದ್ದಿದ್ದರೂ ರೈತರ ಸಾಲ ಮನ್ನಾ ಬಗ್ಗೆ ಸರ್ಕಾರಗಳಿಂದ ಯಾವುದೇ ಕ್ರಮ ಬಂದಿಲ್ಲ ಎಂದು ಹೇಳಿದರು. ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಮಾರಡಗಿ, ಬಸವರಾಜ ಮುನವಳ್ಳಿ, ಈಶ್ವರಪ್ಪ ಗಂಗಾಯಿ, ಪಿಟಿ, ಕಿರೇಸೂರ, ಬಸವಾರಜ ಪಲ್ಲೇದ, ಶೇಖಪ್ಪ ಕುರಟ್ಟಿ, ವೀರಾಪಾಕ್ಷಪ್ಪ ಗಿಡಕ್ಕನವರ, ಗೂಳಪ್ಪ ಹಂಚಿನಾಳ, ಮಂಜೂನಾಥ ಹಡಪದ, ರುದ್ರಪ್ಪ ಮಡ್ಲಿ, ಮಂಜುನಾಥ ಯಲಿಗಾರ, ಹಾಗೂ ತಾಲೂಕು ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin