ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯಿಂದ ನೀತಿ ಸಂಹಿತೆ ಉಲ್ಲಂಘನೆ

ಈ ಸುದ್ದಿಯನ್ನು ಶೇರ್ ಮಾಡಿ

kALALE-KESHAVA-MURTHY

ನಂಜನಗೂಡು,ಏ.9-ಮತದಾನದ ಸಂದರ್ಭದಲ್ಲಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಾಗಿದೆ.   ಇಂದು ಬೆಳಗ್ಗೆ ಕಳಲೆಗ್ರಾಮದ ಪಂಚಾಯ್ತಿ ಲೋಕಶಿಕ್ಷಣ ಕೇಂದ್ರದ ಬೂತ್ ಸಂಖ್ಯೆ 119ರಲ್ಲಿ ಮತ ಚಲಾವಣೆಗೆ ಕೇಶವಮೂರ್ತಿಯವರು ಆಗಮಿಸಿದ್ದರು. ಮತದಾನ ಮಾಡಲು ಮತಗಟ್ಟೆಗೆ ಒಳ ಹೋಗುವಾಗ ತಮ್ಮ ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡಿದ್ದರು. [ ಇದನ್ನೂ ಓದಿ :  ನಂಜನಗೂಡು-ಗುಂಡ್ಲುಪೇಟೆ ಮಿನಿ ಫೈಟ್ (Live Updates) ] ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪ ಎದುರಾಗಿದೆ.   ಕಾಂಗ್ರೆಸ್ ಚಿಹ್ನೆ ಇರುವ ಶಾಲು ಹೊದ್ದು ಬಂದು ಕೇಶವಮೂರ್ತಿ ಮತದಾನ ಮಾಡಿರುವ ಬಗ್ಗೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin