ನಂಜನಗೂಡು-ಗುಂಡ್ಲುಪೇಟೆ ಮಿನಿ ಫೈಟ್ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Nanjanagud-Gundlupete

ಬೆಂಗಳೂರು, ಏ.9- ಇಡೀ ರಾಜ್ಯದ ಜನತೆಯ ಚಿತ್ತವನ್ನು ತನ್ನತ್ತ ಸೆಳೆದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ.  ನಂಜನಗೂಡಿನಲ್ಲಿ ಒಟ್ಟು 236 ಮತಗಟ್ಟೆಗಳಿದ್ದು, ಇದರಲ್ಲಿ 72 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ನೆರೆಯ ಗುಂಡ್ಲುಪೇಟೆಯಲ್ಲಿ 250 ಮತಗಟ್ಟೆಗಳಿದ್ದು, 33 ಸೂಕ್ಷ್ಮ ಹಾಗೂ 39 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಆಯೋಗ ಘೋಷಿಸಿದೆ.  2,00,498 ಮತದಾರರನ್ನು ಹೊಂದಿರುವ ನಂಜನಗೂಡು ಹಾಗೂ 2,00,862 ಮತದಾರರು ಗುಂಡ್ಲುಪೇಟೆಯಲ್ಲಿದ್ದಾರೆ.

ಶೇಕಡಾವಾರು ಮತದಾನ :

Percetage


Live Reports :

>  ವೋಟ್ ಹಾಕಿ ಪ್ರಾಣ ಬಿಟ್ಟ ಅಜ್ಜಿ..!
ಗುಂಡ್ಲುಪೇಟೆ,ಏ.9- ಮತದಾನ ಮಾಡಿ ಮನೆಗೆ ಹಿಂದಿರುಗಿದ ವೃದ್ದೆಯೊಬ್ಬರು ಮನೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಹಂಗಳ ಗ್ರಾಮದ ನಿವಾಸಿ ದೇವಮ್ಮ(93) ಮೃತಪಟ್ಟ ವೃದ್ಧೆ.  ಇಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ತಾಲ್ಲೂಕಿನ ಅಂಗಾಳದ ಗ್ರಾಮದ ಮತಗಟ್ಟೆ ಸಂಖ್ಯೆ 166ಕ್ಕೆ ಆಗಮಿಸಿದ ವೃದ್ದೆ ದೇವಮ್ಮ ಮತದಾನ ಮಾಡಿ ಮನೆಗೆ ಹಿಂದಿರುಗಿದ ನಂತರ ಮೃತಪಟ್ಟಿದ್ದಾರೆ.

> ಕಳಲೆ ಕೇಶವಮೂರ್ತಿಯಿಂದ ನೀತಿ ಸಂಹಿತೆ ಉಲ್ಲಂಘನೆ : ಮತದಾನದ ಸಂದರ್ಭದಲ್ಲಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಾಗಿದೆ.   ಇಂದು ಬೆಳಗ್ಗೆ ಕಳಲೆಗ್ರಾಮದ ಪಂಚಾಯ್ತಿ ಲೋಕಶಿಕ್ಷಣ ಕೇಂದ್ರದ ಬೂತ್ ಸಂಖ್ಯೆ 119ರಲ್ಲಿ ಮತ ಚಲಾವಣೆಗೆ ಕೇಶವಮೂರ್ತಿಯವರು ಆಗಮಿಸಿದ್ದರು. ಮತದಾನ ಮಾಡಲು ಮತಗಟ್ಟೆಗೆ ಒಳ ಹೋಗುವಾಗ ತಮ್ಮ ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡಿದ್ದರು.  ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪ ಎದುರಾಗಿದೆ.   ಕಾಂಗ್ರೆಸ್ ಚಿಹ್ನೆ ಇರುವ ಶಾಲು ಹೊದ್ದು ಬಂದು ಕೇಶವಮೂರ್ತಿ ಮತದಾನ ಮಾಡಿರುವ ಬಗ್ಗೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

Voting-1
> ನಂಜನಗೂಡಿನಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳೂ ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಂಡ್ಲುಪೇಟೆಯಲ್ಲಿ ಪಕ್ಷೇತರರು ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಜೆ 5ರವರೆಗೆ ಮತದಾನ ನಡೆಯಲಿದೆ. ಏ.13ರಂದು ಫಲಿತಾಂಶ ಹೊರಬೀಳಲಿದೆ.

Voting-2

> ಮತಗಟ್ಟೆ ಸಂಖ್ಯೆ 105 ಮತ್ತು 106ರಲ್ಲಿ ಮತ ಯಂತ್ರ ಕೈಕೊಟ್ಟಿದ್ದರಿಂದ ಅದನ್ನು ಸರಿಪಡಿಸಲು ಚುನಾವಣಾಧಿಕಾರಿಗಳು ಹರಸಾಹಸಪಟ್ಟರು. ಅದೇ ರೀತಿ ಭೀಮನಮಡು ಗ್ರಾಮದ ಮತ ಯಂತ್ರದಲ್ಲೂ ಕೂಡ ತಾಂತ್ರಿಕ ದೋಷ ಕಂಡುಬಂದಿತು.  ಅದಕ್ಕಾಗಿ ಅರ್ಧಗಂಟೆ ಮತದಾನ ವಿಳಂಬವಾಗಿತ್ತು. ಇವುಗಳನ್ನು ಹೊರತುಪಡಿಸಿದರೆ ಎರಡೂ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿಯಾಗಿಲ್ಲ.

> ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಸರತಿಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹುಂಡಿ ಮತ್ತು ಮಡಹಳ್ಳಿ ಮತಗಟ್ಟೆಗಳಲ್ಲಿ ತಾಂತ್ರಿಕ ತೊಂದರೆಗಳಿಂದ ಮತದಾನ ವಿಳಂಬವಾಗಿತ್ತು.

Voting-5

>  ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಅವರು, ಹಾಲಹಳ್ಳಿಯಲ್ಲಿರುವ ದಿ.ಮಹದೇವಪ್ರಸಾದ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಪುತ್ರ ಗಣೇಶ್ ಅವರೊಂದಿಗೆ ತೆರಳಿ ಮತ ಚಲಾಯಿಸಿದರು.

> ಮತಗಟ್ಟೆ ನಂಬರ್ 49ರ ಹಳ್ಳದಕೆರೆಯಲ್ಲಿ ಚುನಾವಣಾ ಸಿಬ್ಬಂದಿ ಎಡಗೈಗೆ ಹಾಕಬೇಕಿದ್ದ ಶಾಹಿಯನ್ನು ಬಲಗೈಗೆ ಹಾಕುತ್ತಿರುವುದಕ್ಕೆ  ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕೂಡಲೇ ಮತಗಟ್ಟೆಗೆ ಆಗಮಿಸಿದ ಚುನಾವಣಾಧಿಕಾರಿಗಳು ಅದನ್ನು ಸರಿಪಡಿಸಿದರು.

Voting-3

> ಹಲವೆಡೆ ಮತ ಯಂತ್ರಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಳಂಬವಾದ ಪ್ರಕರಣಗಳು ಕೇಳಿಬಂದಿವೆ.

>  ನಂಜನಗೂಡು ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಈ ಕ್ಷೇತ್ರದಲ್ಲಿ ಮತ ಇಲ್ಲ.

>  ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ ಕಳಲೇ ಗ್ರಾಮದ ಲೋಕಶಿಕ್ಷಣ ಕೇಂದ್ರ 119ನೇ ಬೂತ್‍ನಲ್ಲಿ ತಮ್ಮ ಮತ ಚಲಾಯಿಸಿದರು.

Voting-4

>  ನಂಜನಗೂಡು ಉಪಚುನಾವಣೆಯ ಮತದಾನ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಜನ ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಮತಗಟ್ಟೆಗಳ ಮುಂದೆ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ.

>  ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಶಾಲು, ಕರಪತ್ರ, ಟೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು. ಅಶೋಕಪುರಂ ಮತಗಟ್ಟೆಯಲ್ಲಿ 100 ಮೀಟರ್ ವ್ಯಾಪ್ತಿಯೊಳಗೆ ಪ್ರಚಾರ ನಡೆಸುತ್ತಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರನ್ನು 100 ಮೀಟರ್ ವ್ಯಾಪ್ತಿಯಿಂದ ಹೊರಕ್ಕೆ ಕಳುಹಿಸಲಾಗಿದೆ.

> ಸ್ವ ಗ್ರಾಮ ಕಳಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯಿಂದ ಮತದಾನ. ಮತಗಟ್ಟೆಯೊಳಕ್ಕೆ ತೆರಳುವ ವೇಳೆ ಕಾಂಗ್ರೆಸ್ ಚಿನ್ಹೆ ಹೊಂದಿರುವ ಶಾಲು ಧರಿಸಿದ್ದ ಕೇಶವಮೂರ್ತಿ. ಇದರಿಂದ ಕಳಲೆ ಕೇಶವಮೂರ್ತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.


ಅಭ್ಯರ್ಥಿಗಳ ವಿವರ : 

ನಂಜನಗೂಡು ಅಭ್ಯರ್ಥಿಗಳು :
ಕಾಂಗ್ರೆಸ್-ಕಳಲೆ ಕೇಶವಮೂರ್ತಿ
ಬಿಜೆಪಿ-ವಿ.ಶ್ರೀನಿವಾಸ್‍ಪ್ರಸಾದ್

Nanjanagud--01

ಗುಂಡ್ಲುಪೇಟೆ ಅಭ್ಯರ್ಥಿಗಳು :

ಕಾಂಗ್ರೆಸ್- ಗೀತಾ ಮಹದೇವಪ್ರಸಾದ್
ಬಿಜೆಪಿ- ನಿರಂಜನ್‍ಕುಮಾರ್

Gundlupete-Niranjan-Geetha

ಮತದಾರರು ಮತ್ತು ಮತಗಟ್ಟೆಗಳ ವಿವರ  : 

ಒಟ್ಟು ಮತದಾರರು ನಂಜನಗೂಡು -2,00,498

ಪುರುಷರು – 1,01,267
ಮಹಿಳೆಯರು-99,231
ಒಟ್ಟು ಮತಗಟ್ಟೆಗಳು-236
ಅತಿ ಸೂಕ್ಷ್ಮ ಮತಗಟ್ಟೆ-70

ಒಟ್ಟು ಮತದಾರರು ಗುಂಡ್ಲುಪೇಟೆ -2,00,862

ಪುರುಷರು – 1,00,144
ಮಹಿಳೆಯರು-1,00,701
ಒಟ್ಟು ಮತಗಟ್ಟೆಗಳು-250
ಅತಿ ಸೂಕ್ಷ್ಮ ಮತಗಟ್ಟೆ-39
ಸೂಕ್ಷ್ಮ ಮತಗಟ್ಟೆ-33

ಮತದಾನದ ಸಮಯ : ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ

ಸರ್ಪಗಾವಲು:

ಚುನಾವಣೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾಲೀಸ್ ಸರ್ಪಗಾವಲು ಹಾಕಲಾಗಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಜಾಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು , ನಂಜನಗೂಡಿನಲ್ಲಿ 6 ಅರೆಸೇನಾ ಪಡೆಗಳ 6 ತುಕಡಿಯೊಂದಿಗೆ 2 ಸಾವಿರ ಜಾಲೀಸರನ್ನು ಚುನಾವಣಾ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಜಿಲ್ಲಾ ಜಾಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಜಾಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಡಿವೈಎಸ್ಪಿ 5, ಪಿಎಸ್‍ಐ 56, ಪಿಎಸ್‍ಐ 56, ಆರ್‍ಪಿಐ 1, ಎಎಸ್‍ಐ 167, ಹೆಡ್ ಕಾನ್‍ಸ್ಟೆಬಲ್ 409, ಕಾನ್‍ಸ್ಟೆಬಲ್ 423, ಆರ್‍ಎಸ್‍ಐ ಇಬ್ಬರು ಹಾಗೂ ಹೆಚ್‍ಜಿಗಳು 210 ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ನಂಜನಗೂಡು ಕ್ಷೇತ್ರದಲ್ಲಿ 72 ಅತಿಸೂಕ್ಷ್ಮ , 124 ಸೂಕ್ಷ್ಮ ಮತ್ತು 40 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು , ಒಟ್ಟು 1375 ಮತದಾನ ಅಧಿಕಾರಿಗಳನ್ನು ನೇಮಿಸಲಾಗಿದೆ. ಭದ್ರತೆಗಾಗಿ 55 ಸಹಾಯಕ ಸಬ್‍ಇನ್‍ಸ್ಪೆಕ್ಟರ್, 128 ಹೆಡ್‍ಕಾನ್ಸ್ಟೆಬಲ್, 250 ಜಾಲೀಸ್ ಕಾನ್‍ಸ್ಟೆಬಲ್, 365 ಸಿಪಿಎಂಎಫ್, 194 ಹೋಂಗಾರ್ಡ್‍ಗಳನ್ನು ನೇಮಿಸಲಾಗಿದೆ. ಮತದಾನದ ವ್ಯವಸ್ಥೆಯನ್ನು ವಿಡಿಯೋ ಮಾಡುವ ಸಂಬಂಧ 250 ಮಂದಿ ವಿಡಿಯೋಗ್ರಾಫರ್‍ಗಳನ್ನು ನೇಮಕ ಮಾಡಲಾಗಿದೆ.

ಅರೆಸೇನಾಪಡೆ ಜತೆ ಸ್ಥಳೀಯ ಜಾಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.


 

 

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin