ನಾರ್ವೆಯಲ್ಲಿ ತಪ್ಪಿದ ಭಾರೀ ಸ್ಪೋಟ, ಭಯೋತ್ಪಾದಕನೋರ್ವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Norway-police

ಸ್ಟಾವನ್‍ಗೆರ್, (ನಾರ್ವೆ), ಏ.9-ನಾರ್ವೆ ರಾಜಧಾನಿ ಓಸ್ಲೋದ ಅತ್ಯಂತ ಜನಸಂದಣಿ ಪ್ರದೇಶದಲ್ಲಿ ಪತ್ತೆಯಾದ ಸ್ಫೋಟಕವೊಂದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದು, ಸಂಭವಿಸಬಹುದಾದ ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ. ಈ ಸಂಬಂಧ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ.
ಬಾಂಬ್ ರೀತಿಯ ಭಾರೀ ಸ್ಫೋಟಕವೊಂದು ಪತ್ತೆಯಾಗಿರುವುದನ್ನು ಓಸ್ಲೋ ಪೊಲೀಸ್ ಮುಖ್ಯಸ್ಥ ವಿಡಾರ್ ಪೆಡೆರ್‍ಸೆನ್ ಖಚಿತಪಡಿಸಿದ್ದಾರೆ. ಈ ಸ್ಫೋಟಕವನ್ನು ನಿಷ್ಕ್ರಿಯ ಅಥವಾ ತಟಸ್ಥಗೊಳಿಸಲಾಗಿದೆ ಎಂದು ಪೊಲೀಸ್ ಟ್ವೀಟರ್ ತಿಳಿಸಿದೆ. ಬಂಧಿತ ಉಗ್ರಗಾಮಿ ಬಗ್ಗೆ ಅಥವಾ ಸ್ಫೋಟಕದ ಬಗ್ಗೆ ಯಾವುದೇ ಸ್ಪಷ್ಟ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಗ್ರಿಯೋನ್‍ಲ್ಯಾಂಡ್ ಅಂಡರ್‍ಗ್ರೌಂಡ್ ಸ್ಟೇಷನ್ ಹೊರಗೆ ರಸ್ತೆಯಲ್ಲಿ ಸ್ಪೋಟಕ ಪತ್ತೆಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆ ಪ್ರದೇಶದ ಜನರನ್ನು, ಬಾರ್ ಮತ್ತು ರೆಸ್ಟೋರೆಂಟ್‍ಗಳು ಹಾಗೂ ಅಂಗಡಿಗಳನ್ನು ತೆರವುಗೊಳಿಸಿದರು. ನಂತರ ಅದನ್ನು ನಿಷ್ಕ್ರಿಯಗೊಳಿಸಿ ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ ಎಂದು ವಿಡಾರ್ ತಿಳಿಸಿದ್ದಾರೆ. ಫ್ರಾನ್, ಇಂಗ್ಲೆಂಡ್, ಸ್ವೀಡನ್ ಸೇರಿದಂತೆ ಅನೇಕ ದೇಶಗಳಲ್ಲಿ ಭಯೋತ್ಪಾದಕರ ದಾಳಿಗಳ ಹಿನ್ನೆಲೆಯಲ್ಲಿ ನಾರ್ವೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin