ಮುಗಿದ ಲಾರಿ ಮುಷ್ಕರ ಅಂತ್ಯ : ಸಹಜ ಸ್ಥಿತಿಯತ್ತ ಸರಕು ಸಾಗಾಣೆ

ಈ ಸುದ್ದಿಯನ್ನು ಶೇರ್ ಮಾಡಿ

Lorry-Straike--01

ಬೆಂಗಳೂರು, ಏ.9-ಕಳೆದ 10 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸರಕು ಸಾಗಾಣಿಕೆ ಸಹಜ ಸ್ಥಿತಿಯತ್ತ ಸಾಗಿದೆ. ಮುಷ್ಕರಕ್ಕೆ ಬೆಂಬಲ ನೀಡಿದ ಎಲ್ಲ ಲಾರಿ ಮಾಲೀಕರು, ಚಾಲಕರಿಗೆ ಸಂಘದ ಪದಾಧಿಕಾರಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಕೆ ಭರವಸೆ ನೀಡಿದ ರಾಜ್ಯ ಸರ್ಕಾರಕ್ಕೂ ಅವರು ಅಭಿನಂದನೆ ಸಲ್ಲಿಸಿದ್ದಾರೆ.  ಹೆಚ್ಚಳ ಮಾಡಿದ್ದ ವಿಮಾ ಪ್ರೀಮಿಯಮ್ ದರವನ್ನು ಶೇ.23ರಷ್ಟು ಇಳಿಕೆ ಮಾಡಲು ಸರ್ಕಾರ ಒಪ್ಪಿಕೊಂಡಿರುವುದಕ್ಕೆ ಲಾರಿಯವರಿಗೆ ಸಾಕಷ್ಟು ಅನುಕೂಲವಾಗಿದ್ದು, ನಿನ್ನೆ ರಾತ್ರಿಯೇ ಮುಷ್ಕರ ಕೈಬಿಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಭಾರೀ ವಾಹನಗಳು, ಗೂಡ್ಸ್ ವಾಹನಗಳ ಓಡಾಟ ಪ್ರಾರಂಭವಾಗಿದೆ.

ಹೈವೇಗಳಲ್ಲಿ ಹಲವು ದಿನಗಳಿಂದ ಟೆಂಟ್ ಹಾಕಿದ್ದ ಚಾಲಕರು ಕ್ಲೀನರ್‍ಗಳು ತಮ್ಮ ಲಾರಿಗಳೊಂದಿಗೆ ಓಡಾಟವನ್ನು ಆರಂಭಿಸಿದರು. ಎಪಿಎಂಸಿ ಸೇರಿದಂತೆ ಎಲ್ಲ ಮಾರುಕಟ್ಟೆಗಳಿಗೆ ಲಾರಿಗಳ ಮೂಲಕ ಆಹಾರ ಪದಾರ್ಥಗಳು, ವಿವಿಧ ಅಗತ್ಯ ವಸ್ತುಗಳು ಬರಲಾರಂಭಿಸಿವೆ. ಹಣ್ಣು , ತರಕಾರಿ, ಬೇಳೆಕಾಳು ಮಾರುಕಟ್ಟೆಗೆ ಬರುತ್ತಿವೆ. ಭಾರೀ ಪ್ರಮಾಣದ ಸರಕು ಸಾಗಾಣಿಕೆಗಳನ್ನು ಹೊತ್ತ ಲಾರಿಗಳು ಹೈವೇಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin