‘ಮೋದಿಜೀ ನನ್ನನ್ನು ಸಂಕಷ್ಟದಿಂದ ಪಾರು ಮಾಡಿ’

ಈ ಸುದ್ದಿಯನ್ನು ಶೇರ್ ಮಾಡಿ

raakhi

ರಾಖಿ ಸಾವಂತ್-ಸಿನಿಮಾಗಳಲ್ಲಿ ಐಟಂ ನಂಬರ್ ಡ್ಯಾನ್ಸರ್ ಆಗಿ, ಟಿವಿ ಶೋಗಳಲ್ಲಿ ವಿವಾದಾತ್ಮಕ ನಟಿಯಾಗಿ ಗಮನಸೆಳೆದವಳು. ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ರಾಖಿಗೆ ಈಗ ಕಾನೂನು ಕುಣಿಕೆಯಲ್ಲಿ ಸಿಕ್ಕಿ ಬೀಳುವ ಭೀತಿ. ಮಹಾಗ್ರಂಥ ರಾಮಾಯಣದ ಕತ್ರು ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಸಿಲುಕಿ ಕಾನೂನು ಸಂಕಷ್ಟಕ್ಕೆ ಸಿಲುಕಿರುವ ರಾಖಿ ತನ್ನನ್ನು ಸಂಕಷ್ಟದಿಂದ ಪಾರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾಳೆ. ಮಿಡಿಯಾ ಕೀ ಬೇಟಿ ಎಂದೇ ತನ್ನನ್ನು ತಾನು ಕರೆದುಕೊಂಡಿರುವ ಈಕೆ ನನಗೆ ಈವರೆಗೆ ಯಾವುದೇ ಅರೆಸ್ಟ್ ವಾರೆಂಟ್ ಬಂದಿಲ್ಲ. ಏನೂ ಆಗದಿದ್ದರೂ ಇದನ್ನೇ ದೊಡ್ಡ ಸುದ್ದಿ ಮಾಡಿ ಬೊಬ್ಬಿರಿಯುತ್ತಿರುವ ಮಂದಿಯನ್ನು ಬಂಧಿಸಬೇಕು ಎಂದು ಹೇಳಿದ್ದಾಲೆ. ನನ್ನನ್ನು ಪೊಲೀಸರು ಏಕೆ ಹುಡುಕುತ್ತಿದ್ದಾರೆ ಎಂಬುದೇ ನನಗೆ ಗೊತ್ತಿಲ್ಲ. ನಾನು ಓಡಿ ಹೋಗಿಲ್ಲ.

ನಾನು ಹಿಂದೂಸ್ತಾನ್ ಮಗಳು. ನಾನು ಹಿಂದುಸ್ತಾನದಲ್ಲೇ ಇದ್ದೇನೆ.. ಮುಂಬೈನಲ್ಲಿ ಶೂಟಿಂಗ್‍ನಲ್ಲಿದ್ದೆ. ನಾನು ಏಲ್ಲೂ ಹೋಗಿಲ್ಲ. ನಾನು 2016ರಲ್ಲಿ ಏನೋ ಹೇಳಿದ್ದಕ್ಕೆ 2017ರಲ್ಲಿ ವಾರೆಂಟ್ ಜಾರಿಗೊಳಿಸಲಾಗಿದೆ. ಅದು ನನಗೆ ತಲುಪಿಲ್ಲ. ಪೊಲೀಸರಾಗಲಿ ನನ್ನನ್ನು ಸಂಪರ್ಕಿಸಿಲ್ಲ ಅಥವಾ ವಾರೆಂಟ್ ನನಗೆ ತಲುಪಿಲ್ಲ ಎನ್ನುತ್ತಾಳೆ ರಾಖಿ. ನಾನು ಈಗ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೇನೆ. ನಾನು ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿಲ್ಲ. ಇದನ್ನು ನಾನು ಎಲ್ಲಿ ಬೇಕಾದರೂ ಸಾಬೀತು ಮಾಡುತ್ತೇನೆ. ನಾನು ಅಮಾಯಕಳು. ಮೋದಿಜಿ ಮತ್ತು ಅಮಿತ್ ಶಾಜೀ ನನ್ನನ್ನು ಈ ಸನ್ನಿವೇಶದಿಂದ ಪಾರು ಮಾಡಬೇಕು ಎಂದು ಮನವಿ ಮಾಡಿದ್ದಾಳೆ ಐಟಂ ನಂಬರ್ ನಟಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin