ವಿಧಾನಸಭಾ ಚುನಾವಣೆ ಟಿಕೆಟ್‍ಗಾಗಿ ತೀವ್ರ ಪೈಪೋಟಿ 

ಈ ಸುದ್ದಿಯನ್ನು ಶೇರ್ ಮಾಡಿ

hunagunda

-ಅಮರೇಶ. ಮ. ನಾಗೂರ

ಹುನಗುಂದ,ಏ.9- ಹುನಗುಂದ ವಿಧಾನಸಭಾ ಮತಕ್ಷೇತ್ತ್ರವು ರಾಜ್ಯದಲ್ಲಿ ಒಂದು ವಿಶಿಷ್ಟ ಹಾಗೂ ಕ್ಲಿಷ್ಟಕರವಾದ ಮತಕ್ಷೇತ್ರವೆಂಬುದು ರಾಜಕೀಯ ಚಿಂತಕರ ಅಭಿಪ್ರಾಯ. ಈ ಕ್ಷೇತ್ರದಿಂದ ಆಯ್ಕೆಯಾದ ಪ್ರಮುಖರಲ್ಲಿ ಕಾಂಗ್ರೆಸ್‍ನ ಎಸ್.ಆರ್. ಕಂಠಿ, ಎಸ್.ಬಿ. ನಾಗರಾಳ, ಎಸ್.ಆರ್. ಕಾಶಪ್ಪನವರ, ಜನತಾಳದ ಎಸ್.ಎಸ್. ಕಡಪಟ್ಟಿ, ಸಂಸ್ಥಾ ಕಾಂಗ್ರೆಸ್‍ನಿಂದ ಜಿ.ಪಿ. ನಂಜಯ್ಯನಮಠ, ಪಕ್ಷೇತರರಾಗಿ ಎಸ್. ಎಸ್. ಕವಿಶೆಟ್ಟಿ, ಉಪ ಚುಣಾವಣೆಯಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾದ ಪ್ರಥಮ ಮಹಿಳಾ ಶಾಸಕರಾಗಿ ಗೌರಮ್ಮ ಕಾಶಪ್ಪನವರ ಹಾಗೂ ವಿಜಯಾನಂದ ಕಾಶಪ್ಪನವರ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್‍ಗಾಗಿ ಪೈಪೋಟಿ  ಇಲ್ಲದೆ ವಿಜಯಾನಂದ ಕಾಶಪ್ಪನವರ ಎದುರಾಳಿಗಳಿಲ್ಲದೆ ಪಕ್ಷದಲ್ಲಿ ಏಕ ಚಕ್ರಾಧಿಪತ್ಯ ಸಾಧಿಸಿದಂತಾಗಿದೆ.
2018 ರಾಜ್ಯ ವಿಧಾನ ಸಭೈ ಚುನಾವಣೆ ಒಂದು ವರ್ಷಗಳ ಅವಧಿ ಮುಂಚಿತವಾಗಿ ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಟಕೆಟ್ ಆಕಾಂಕ್ಷಿಗಳು ಈಗಲೇ ತಮ್ಮ ತಮ್ಮ ಪಕ್ಷಗಳ ಮುಖಂಡರು ಮನ ಓಲೈಕೆಗಾಗಿ ವಿವಿಧ ಕಸರತ್ತಗಳನ್ನು ಮಾಡಿವುದರಲ್ಲಿ ತೊಡಗಿದ್ದಾರೆ.

ಸದ್ಯ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪನವರ ಪ್ರಭಾವದಿಂದ ಮುಂದೆ ಬಿಜೆಪಿ ಅಭ್ಯರ್ಥಿಗಳಿಗೆ ಗೆಲವು ಸುಲಭವೆಂದು ಚುನಾವಣೆಯಲ್ಲಿ ಟಕೆಟ್ ಪಡೆಯಲು ಪಕ್ಷದ ಮುಖಂಡರ ಮೇಲೆ ಪ್ರಭಾವ ಬಿರಲು ಅರ್ಧ ಡಜನ್‍ಗಿಂತಲು ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಕಸರತ್ತು ನಡೆಸುತಿದ್ದಾರೆ. ಈ ಬಾರಿ ಟಿಕೆಟ್ ನನಗೆ ಖಚಿತವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕರ್ತರನ್ನು ಹುರುದುಂಬಿಸುತ್ತಿದ್ದಾರೆ.ಸಂಘ ಪರಿವಾರ, ಎಬಿವಿಪಿ ಬಿಜೆಪಿ, ಹಾಗೂ ಹಿಂದಿನ ಯಡಿಯುರಪ್ಪನವರ ಕೆಜೆಪಿ ಪಕ್ಷದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸಧ್ಯ ರಾಜ್ಯ ಸ್ಲಂ ಮೋರ್ಚಾ ಬಿಜೆಪಿ ಉಪಾಧ್ಯಕ್ಷ ಡಾ ಆರ್.ಮಾರುತೇಶ ಕ್ಷೆತ್ರದಲ್ಲಿ ಬಿರುಸಿನ ಸಂಘಟಣೆಯಲ್ಲಿ ತೊಡಗಿದ್ದು ಪ್ರಭಲ ಆಕಾಂಕ್ಷಿಯಾಗಿದ್ದಾರೆ.

2003ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸಿ 21000ಕ್ಕೂ ಹೆಚ್ಚು ಮತಗಳನ್ನು ಪಡೆದು ಪರಾಭವಗೊಂಡ ಹಿರಿಯ ಮುಖಂಡ ಎಂ.ಎಸ್. ಪಾಟೀಲ ಈ ಬಾರಿ ಪಕ್ಷದ ಟಿಕೆಟ್ ನೀಡುವಂತ್ತೆ ರಾಜ್ಯ ನಾಯಕರ ಮೇಲೆ ಮೂಲ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಸಹಕಾರಿ ಮುಖಂಡ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸುಭಾಸ ತಾಳಿಕೋಟಿ ಆಂತರಿಕವಾಗಿ ಟಿಕೆಟ್ ಪಡೆಯಲು ಎಲ್ಲಾ ರೀತಿಯ ಕಸರತ್ತಗಳನ್ನು ನಡೆಸಿರುವದು ರಾಜಿಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಇವರ ನಡೆ ಕಾದು ನೋಡಬೆಕು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವರ ಹತ್ತಿರದ ಸಂಬಂಧ  ರಾಜ್ಯ ಹಾಲೂ ಪ್ರಕೋಷ್ಟದ ಸಹ ಸಂಚಾಲಕ ಮಲ್ಲಿಕಾರ್ಜು ಶೆಟ್ಟರ ಹಾಗೂ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಖಂಡ ವಿರೇಶ ಕೂಡಲಗಿಮಠ, ಹಾಗೂ ಹಿಂದುಳಿದ ವರ್ಗಗಳ ಮುಖಂಡ ಗೂಡೂರ ಜಿಲ್ಲಾ ಪಂಚಾಯತ ಸದಸ್ಯ ಶಶಿಕಾಂತ ಪಾಟೀಲ ಸೇರಿದಂತ್ತೆ ಬಿಜೆಪಿ ಪಕ್ಷದಲ್ಲಿ ಟಕೇಟ ಆಕಾಂಕ್ಷಿಗಳ ಪಟ್ಟಿ ಸಂಖ್ಯೆ ಹೆಚ್ಚಾಗಲಿದೆ.

ಟಿಕೇಟ್‍ಗಾಗಿ ನಡೆದಿರುವ ಮುಖಂಡರ ಪೈಪೋಟಿ ಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಗೊಂದಲವನ್ನುಂಟ್ಟು ಮಾಡಿದೆ.ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್‍ನಿಂದ ಸ್ಪರ್ಧಿಸುವಂತ್ತೆ ದಿವಗಂತ ಶಾಸಕ ಎಸ್.ಎಸ್.ಕಡಪಟ್ಟಿ ಅವರ ಪುತ್ರ ಜೆಡಿಎಸ್ ಮುಖಂಡ ಬಸವರಾಜ ಕಡಪಟ್ಟಿ ಅವರನ್ನು ಜೆಡಿಎಸ ವರಿಷ್ಠರು ಕಣಕ್ಕಿಳಿಸುವ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿದೆ.ರಾಜ್ಯ ಜಂಗಮ ಸಮಾಜದ ಅಧ್ಯಕ್ಷ ಎಸ್.ಆರ್. ನವಲಿ ಹಿರೇಮಠ ಚುನಾವಣ ಅಖಾಡಕ್ಕೆ ಸನ್ನದ್ಧರಾಗಿದ್ದು ಮುಂದೇ ಬಿಜೆಪಿ, ಜೆಡಿಎಸ್, ಕಾಂಗೆಸ್ ಈ ಮೂರು ಪಕ್ಷಗಳಲ್ಲಿ ಆಯ್ಕೆ ಯಾವುದು ಎಂಬುದು ನಿಗೂಡವಾಗಿದೆ.ಹುನಗುಂದದವರೇ ಆದ ರಾಜ್ಯ ಜೆಡಿಯು ಅಧ್ಯಕ್ಷ ಡಾ ಎಮ್.ಪಿ. ನಾಡಗೌಡರು ಈ ಬಾರಿ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು ಘೋಷಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin