ಈ ಬಾರಿಯ ಬೆಂಗಳೂರಲ್ಲಿ ನಡೆಯಲಿದೆ ‘ವಿಶ್ವ ಯೋಗ ದಿನಾಚರಣೆ’

ಈ ಸುದ್ದಿಯನ್ನು ಶೇರ್ ಮಾಡಿ

World-Yoga-Day--01

ವೈ. ಎಸ್. ರವೀಂದ್ರ
ಬೆಂಗಳೂರು, ಏ.10-ಪ್ರತಿಯೊಬ್ಬರಿಗೂ ಸದೃಢ ಆರೋಗ್ಯ ಸಿಗಲೆಂದು ಆಚರಿಸುತ್ತಿರುವ ವಿಶ್ವ ಯೋಗ ದಿನಾಚರಣೆ ಈ ಬಾರಿ ಜೂನ್ 21 ರಂದು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಲು ನಿರ್ಧರಿಸಿದೆ. ವಿಧಾನಸೌಧ ಮುಂಭಾಗ ನಡೆಯಲಿರುವ ವಿಶ್ವ ಯೋಗ ದಿನಾಚರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

ಬೆಂಗಳೂರಿನಲ್ಲಿ ವಿಶ್ವ ಯೋಗ ದಿನಾಚರಣೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಪ್ರಧಾನ ಮಂತ್ರಿ ಭಾಗವಹಿಸುವುದನ್ನು ಅವರ ಕಾರ್ಯಾಲಯ ಖಚಿತಪಡಿಸಿವೆ. 2016ರಲ್ಲಿ ಬೆಂಗಳೂರಿನಲ್ಲಿ ವಿಶ್ವ ಯೋಗ ದಿನಾಚರಣೆ ಆಯೋಜಿಸಬೇಕಾಗಿತ್ತಾದರೂ ಕೊನೆ ಕ್ಷಣದಲ್ಲಿ ರಾಜಸ್ಥಾನದ ಪಾಲಾಗಿತ್ತು.
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಪ್ರಭಾವಿ ಸಚಿವರೊಬ್ಬರ ಕೃಪೆಯಿಂದ ಈ ಬಾರಿ ಯೋಗ ದಿನಾಚರಣೆ ಬೆಂಗಳೂರಿನ ಪಾಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ವಿಧಾನಸೌಧ ಮುಂಭಾಗ ಕಾರ್ಯಕ್ರಮ ನಡೆಸಲು ಉದ್ದೇಶಿಸಿದೆ. ಈ ಮೊದಲು ಕಂಠೀರವ ಕ್ರೀಡಾಂಗಣ ಇಲ್ಲವೆ, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಭದ್ರತೆ, ಸಾರ್ವಜನಿಕರ ಭಾರೀ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದನ್ನು ತುಸು ಕಡಿಮೆ ಮಾಡಲು ಶಕ್ತಿಕೇಂದ್ರದ ಮುಂದೆಯೇ ನಡೆಸಲು ತೀರ್ಮಾನಿಸಲಾಗಿದೆ.

ವಿಧಾನಸೌಧ ಮುಂಭಾಗ ಸಚಿವರು ಹಾಗೂ ಗಣ್ಯ ವ್ಯಕ್ತಿಗಳು ಮಾತ್ರ ಭಾಗವಹಿಸಲು ಅನುಕೂಲವಾಗುವಂತೆ ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಗಮನಸೆಳೆದಿದ್ದ ಕರುನಾಡು ರಾಜಧಾನಿ ಇದೀಗ ಯೋಗ ದಿನಾಚರಣೆ ಮೂಲಕ ವಿಶ್ವದ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin