ಟೈಲರ್ ನನ್ನ ಕೊಂದು ಹಾಕಿದ ಬೀದಿದನಗಳು

ಈ ಸುದ್ದಿಯನ್ನು ಶೇರ್ ಮಾಡಿ

Cow--on-Road

ದಾವಣಗೆರೆ,ಏ.10-ಬಿಡಾಡಿ ದನಗಳ ದಾಳಿಯಿಂದ ಟೈಲರ್ ಸಾವನ್ನಪ್ಪಿರುವ ಘಟನೆ ಕೆಟಿಜೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಟಿಜೆನಗರ 16ನೇ ಕ್ರಾಸ್ ನಿವಾಸಿ ಶಂಕರಪ್ಪ(60) ಮೃತಪಟ್ಟ ದುರ್ದೈವಿ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಶಂಕರಪ್ಪ ಎಂದಿನಂತೆ ತಡರಾತ್ರಿ 11 ಗಂಟೆ ಸಮಯದಲ್ಲಿ ಅಂಗಡಿಯಿಂದ ಮನೆಗೆ ಸೈಕಲ್‍ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಜಯದೇವ ವೃತ್ತದ ಬಳಿ 30ರಿಂದ 40 ಬಿಡಾಡಿ ದನಗಳ ಮಧ್ಯೆ ಸಿಲುಕಿದಾರೆ.  ಈ ಸಂದರ್ಭದಲ್ಲಿ ಮಳೆಯಾಗುತ್ತಿದ್ದು , ಗುಡುಗು ಸಿಡಲಿನ ಶಬ್ದಕ್ಕೆ ಬೆದರಿದ ದನಗಳು ಶಂಕರಪ್ಪನವರ ಮೇಲೆ ದಾಳಿ ನಡೆಸಿವೆ. ಕೊಂಬಿನಿಂದ ಸೈಕಲ್‍ನ್ನು ಎತ್ತಿ ಬಿಸಾಡಿವೆ. ಆತನ ಹೊಟ್ಟೆಗೆ ಕೊಂಬಿನಿಂದ ತಿವಿದಿದ್ದು, ಶಂಕರಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಕೆಟಿಜೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಗರದಲ್ಲಿ ಬಿಡಾಡಿ ದನಗಳ ಜೊತೆಗೆ ಹಂದಿಗಳು ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಭಯಭೀತರಾಗಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಈ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin