ನಾಯಿಗಳಿಗೆ ಆಹಾರವಾದ 20ಕ್ಕೂ ಹೆಚ್ಚು ಕುರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Goat--01

ಶಿರಾ, ಏ.10– ನಾಯಿಗಳ ದಾಳಿಗೆ 20ಕ್ಕೂ ಹೆಚ್ಚು ಕುರಿಗಳು ಬಲಿಯಾಗಿರುವ ಘಟನೆ ತಾಲೂಕಿನ ಚಿನ್ನನಕೋಟೆ ಬಳಿ ನಡೆದಿದೆ. ಇಂದು ಮುಂಜಾನೆ ಏಕಾಏಕಿ ಕುರಿದೊಡ್ಡಿಗೆ ನುಗ್ಗಿದ 10ಕ್ಕೂ ಹೆಚ್ಚು ನಾಯಿಗಳು ಕುರಿಗಳನ್ನು ಕಚ್ಚಿ ಕೊಂದು ನಂತರ ಅವುಗಳನ್ನು ಎಳೆದುಕೊಂಡು ಪರಾರಿಯಾಗಿವೆ.  ಕೆಲವು ಕುರಿಗಳು ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡಿಹೋಗಿವೆ. ಕುರಿ ಅರಚಿಕೊಳ್ಳುತ್ತಿದ್ದುದನ್ನು ನೋಡಿ ಕುರಿ ಮಾಲೀಕರಾದ ಚನ್ನಗಿರಿಯಪ್ಪ ಅವರು ಅವುಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಕೆಲವು ಕುರಿಗಳು ಅಲ್ಲೇ ಮೃತಪಟ್ಟರೆ, ಕೆಲವು ನಾಯಿಗೆ ಆಹಾರವಾಗಿವೆ. ಈ ನಾಯಿಗಳ ಹಿಂಡು ಎಲ್ಲಿಂದ ಬಂದಿತು ಎಂಬುದು ತಿಳಿದಿಲ್ಲವಾದರೂ ಏಕಾಏಕಿ ಇಂತಹ ಘಟನೆ ನಡೆದಿರುವುದು ಗ್ರಾಮಸ್ಥರನ್ನು ಚಿಂತೆಗೀಡುಮಾಡಿದೆ.   ಚಿರತೆ, ತೋಳಗಳು ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ತಿನ್ನುತ್ತಿದ್ದವು. ಆದರೆ ಈಗ ನಾಯಿಗಳು ಅದರ ಚಾಳಿ ಹಿಡಿದಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ನಾಯಿಗಳನ್ನು ಹಿಡಿಯಲು ಗ್ರಾಪಂ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಶಿರಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin