ಬ್ಲಾಕ್ ಅಂಡ್ ವೈಟ್ ದಂಧೆ : ದೆಹಲಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ 18 ಕೋಟಿ ಹಳೇ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

Old-Notes

ನವದೆಹಲಿ, ಏ.10– ಹಳೆ ನೋಟುಗಳನ್ನು ಹೊಸ ಕರೆನ್ಸಿಗಳಿಗೆ ಬದಲಿಸಿಕೊಳ್ಳುವ ಜಾಲಗಳ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಆದಾಯ ತೆರಿಗೆ ಅಧಿಕಾರಿಗಳು ದೆಹಲಿಯ ಅಪಾರ್ಟ್‍ಮೆಂಟ್‍ವೊಂದರ ಮೇಲೆ ದಾಳಿ ನಡೆಸಿ 18 ಕೋಟಿ ರೂ.ಗಳ ಚಲಾವಣೆಯಲ್ಲಿ ಇಲ್ಲದ ನೋಟುಗಳನ್ನು ವಶಪಡಿಸಿಕೊಂಡಿದ್ಧಾರೆ.   ರದ್ದಾದ 500 ಮತ್ತು 1,000 ರೂ.ಗಳ ಹಳೆ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಖಚಿತ ಸುಳಿವನ ಮೇರೆಗೆ ಐಟಿ ಅಧಿಕಾರಿಗಳು ದೆಹಲಿಯ ನಾಂದೇವಾಡಿ ಪ್ರದೇಶದ ಅಪಾರ್ಟ್‍ಮೆಂಟ್ ಮೇಲೆ ಈ ದಾಳಿ ನಡೆಸಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯನ್ನು ಪತ್ತೆ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin