ಮೈಸೂರಲ್ಲೊಂದು ಅಪರೂಪದ ವಿವಾಹ : ತನಗಿಂತ 5 ವರ್ಷ ಹಿರಿಯ ಯುವತಿಯನ್ನು ವರಿಸಿದ ಯುವಕ

ಈ ಸುದ್ದಿಯನ್ನು ಶೇರ್ ಮಾಡಿ

Marriage--01

ಮೈಸೂರು, ಏ.10– ಸಾಂಸ್ಕೃತಿಕ  ನಗರಿಯಲ್ಲಿ ಚಿಕ್ಕ ವಯಸ್ಸಿನ ಯುವಕ ತನಗಿಂತ 5 ವರ್ಷ ಹಿರಿಯ ಯುವತಿಯನ್ನು ಮದುವೆಯಾಗುವ ಮೂಲಕ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.  ಭಾರತ ಸಂವಿಧಾನದ ಪ್ರಕಾರ ವಿವಾಹವಾಗಲು ಯುವತಿಗೆ 18 ವರ್ಷ, ಪುರುಷನಿಗೆ 21 ವರ್ಷ ಆಗಿರಬೇಕು. ಆದರೆ, ಮೈಸೂರಿನಲ್ಲಿ 19 ವರ್ಷದ ಯುವಕ 24 ವರ್ಷದ ಯುವತಿಯನ್ನು ವಿವಾಹವಾಗಿದ್ದಾನೆ.  ನಗರದ ಮಂಡಿ ಮೊಹಲ್ಲಾ ನಿವಾಸಿಗಳಾದ ಇವರಿಬ್ಬರು ಸಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ದೇವಾಲಯದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ವಿವಾಹವಾಗಿದ್ದಾರೆ.

ಈ ವಿಷಯ ತಿಳಿದ ಹುಡುಗನ ಮನೆಯವರು ನನ್ನ ಮಗನಿಗೆ ವಿವಾಹವಾಗುವ ವಯಸ್ಸಾಗಿಲ್ಲ, ಇದು ಬಲವಂತದ ವಿವಾಹವಾಗಿದೆ. ನಮ್ಮ ಮಗನನ್ನು ಈ ವಿವಾಹದಿಂದ ಬಂಧಮುಕ್ತಗೊಳಿಸಬೇಕೆಂದು ಯುವಕನ ಪೋಷಕರು ಮಂಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin