ಬೊಕೊ ಉಗ್ರರ ನಿಗ್ರಹಕ್ಕೆ ನೈಜೀರಿಯಾಗೆ ಫೈಟರ್‍ಜೆಟ್‍ಗಳನ್ನು ಮಾರಲು ಮುಂದಾದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump-Jet--01

ವಾಷಿಂಗ್ಟನ್, ಏ.11- ಆಫ್ರಿಕಾ ರಾಷ್ಟ್ರ ನೈಜೀರಿಯಾಗೆ ಕಂಟಕಪ್ರಾಯವಾಗಿರುವ ಬೊಕೊ ಹರಂ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಾಗಿ ಅತ್ಯಾಧುನಿಕ ಯುದ್ದ ವಿಮಾನಗಳನ್ನು ಮಾರಾಟ ಮಾಡಲು ಅಮೆರಿಕ ಮುಂದಾಗಿದೆ. ನೈಜೀರಿಯಾ ಸೇನಾಪಡೆಗಳು ನಡೆಸಿರುವ ಹಿಂಸಾಚಾರ ಮತ್ತು ದೌರ್ಜನ್ಯಗಳ ತೀವ್ರ ಕಳವಳ ವ್ಯಕ್ತವಾಗಿರುವ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಆ ದೇಶದೊಂದಿಗೆ ಫೈಟರ್‍ಜೆಟ್‍ಗಳ ಮಾರಾಟಕ್ಕಾಗಿ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ.

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ನಂತರ ಅತ್ಯಂತ ಕ್ರೂರ ಮತ್ತು ನಿರ್ದಯಿ ಭಯೋತ್ಪಾದಕರಾದ ಬೋಕೊ ಬಂಡುಕೋರರನ್ನು ನಿಗ್ರಹಿಸಲು ಇದು ಉತ್ತಮ ಕ್ರಮವಾಗಿದ್ದರೂ ಸಂಭವಿಸಿಬಹುದಾದ ಮುಗ್ಧ ಜನರ ಸಾವು-ನೋವಿನ ಬಗ್ಗೆ ಆಫ್ರಿಕಾ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin