ಯುದ್ಧಕ್ಕೆ ನಾವು ರೆಡಿ : ಅಮೆರಿಕಾಗೆ ಉತ್ತರ ಕೊರಿಯಾ ಎಚ್ಚರಿಕೆ
ಪಯೊಂಗ್ಯಾಂಗ್, ಏ.11-ಕೊರಿಯಾ ದ್ವೀಪಕಲ್ಪದಲ್ಲಿ ನೌಕಾಪಡೆಯ ಆಕ್ರಮಣ ಸಮೂಹವನ್ನು ನಿಯೋಜಿಸಿರುವ ಅಮೆರಿಕದ ವಿರುದ್ಧ ಕುಪಿತಗೊಂಡಿರುವ ಉತ್ತರ ಕೊರಿಯಾ, ಉದ್ವಿಗ್ನ ಸ್ಥಿತಿ ಭುಗಿಲೆದ್ದರೆ ವಾಷಿಂಗ್ಟನ್ ಜೊತೆ ಯುದ್ಧಕ್ಕೂ ತಾನು ಸಿದ್ಧ ಎಂದು ಎಚ್ಚರಿಕೆ ನೀಡಿದೆ. ನಿರಂತರ ಅಣ್ವಸ್ತ್ರ ಕಾರ್ಯಕ್ರಮಗಳು ಹಾಗೂ ಕ್ಷಿಪಣಿಗಳ ಉಡಾವಣೆ ಮೂಲಕ ಏಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಉತ್ತರ ಕೊರಿಯಾಗೆ ಬಿಸಿ ಮುಟ್ಟಿಸಲು ಅಮೆರಿಕ ಕೊರಿಯಾದ ಪರ್ಯಾಯ ದ್ವೀಪಕ್ಕೆ ನೌಕಾದಳದ ಕಾರ್ಲ್ ವಿನ್ಸೊನ್ ಸ್ಟ್ರೈಟಿಕ್ ಗ್ರೂಪ್ ನಿಯೋಜಿಸಿದೆ.
ಅಮೆರಿಕದ ಈ ಕ್ರಮವನ್ನು ಖಂಡಿಸಿರುವ ಪಯೊಂಗ್ಯಾನ್, ಪರಿಸ್ಥಿತಿ ಗಂಭೀರ ಹಂತ ತಲುಪಿದೆ. ಅಮೆರಿಕ ಮುಂದುವರಿದಿದ್ದೇ ಆದರೆ ಅದಕ್ಕೆ ತಕ್ಕಪಾಠ ಕಲಿಸಲು ತಾನು ಸರ್ವಸನ್ನದ್ಧವಾಗಿರುವುದುದಾಗಿ ಎಚ್ಚರಿಕೆ ನೀಡಿದೆ. ಸಿರಿಯಾ ಸೇನಾಪಡೆಗಳು ನಡೆಸಿದ ರಾಸಾಯನಿಕ ಅಸ್ತ್ರದ ದಾಳಿಗೆ ಪ್ರತೀಕಾರವಾಗಿ ಆ ದೇಶದ ವಾಯುನೆಲೆಗಳನ್ನು ಧ್ವಂಸಗೊಳಿಸಿದ್ದ ಅಮೆರಿಕ, ಉತ್ತರ ಕೊರಿಯಾಗೂ ತನ್ನ ಶಕ್ತಿ ತೋರಿಸಲು ಮುಂದಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS