ವಿಶ್ವನಾಥ್‍ಗೆ ಸೂಕ್ತ ಸ್ಥಾನಮಾನ ನೀಡಲಾಗುವುದು : ಇಬ್ರಾಹಿಂ

ಈ ಸುದ್ದಿಯನ್ನು ಶೇರ್ ಮಾಡಿ

Ibahim--01

ಕೆ.ಆರ್. ನಗರ, ಏ.11-ಈ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ವಿಶ್ವನಾಥ್ ಮತ್ತು ನಾನು ಒಟ್ಟಿಗೆ ಸಭೆ ಸೇರಿ ಸಿದ್ಧರಾಮಯ್ಯ ಮತ್ತು ವಿಶ್ವನಾಥ್ ಅವರ ನಡುವೆ ಇರುವ ವೈಮನಸ್ಸು ಹೋಗಲಾಡಿಸಿ ಅವರಿಗೆ ಪಕ್ಷ ಅಥವಾ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.   ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಲಸದ ಒತ್ತಡದಿಂದ ಹೆಚ್. ವಿಶ್ವನಾಥ್ ರವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸ್ವಲ್ಪವ್ಯತ್ಯಾಸವಾಗಿದೆ. ಆದರೆ ಅವರನ್ನು ದೂರವಿಟ್ಟಿದ್ದಾರೆ ಎಂಬುವುದರಲ್ಲಿ ಅರ್ಥವಿಲ್ಲ. ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲು ಶ್ರಮ ಪಟ್ಟವರಲ್ಲಿ ನನ್ನನ್ನೂ ಸೇರಿದಂತೆ ವಿಶ್ವನಾಥ್ ರವರು ಮೊದಲಿಗರು. ಆದ್ದರಿಂದ ಅವರ ಅನುಭವ ಹಾಗೂ ಪಕ್ಷದ ಸಂಘಟನೆ ಮಾಡಿರುವುದನ್ನು ಕಾಂಗ್ರೆಸ್ ಪಕ್ಷ ಎಂದೂ ಮರೆಯುವಂತಿಲ್ಲ ಎಂದರು.

ಇತರೆ ಪಕ್ಷದಿಂದ ಹಲವಾರು ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ಪಕ್ಷ ಸೇರಲಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಬೇರಿ ಬಾರಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.  ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್, ಮೂಳೆ ತಜ್ಞ ಜಿಲ್ಲಾ ಕಾಂಗ್ರೆಸ್ ಮುಖಂಡ ಡಾ. ಮೆಹಬೂಬ್‍ಖಾನ್, ಪುರಸಭಾ ಮಾಜಿ ಸದಸ್ಯ ಅಸ್ಲಮ್, ಕಾಂಗ್ರೆಸ್ ಯುವ ಮುಖಂಡ ಎ.ಎಮ್.ನಟರಾಜ್, ಮೋಹನ್ ಇನ್ನಿತರರು ಹಾಜರಿದ್ದರು.

Facebook Comments

Sri Raghav

Admin