‘ಮಮತಾ ತಲೆ ಕಡಿದರೆ 11 ಲಕ್ಷ ರೂ. ಇನಾಮು’ : ಬಿಜೆಪಿ ನಾಯಕನ ವಿವಾದಿತ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Mamatha-Banargee--01

ಕೊಲ್ಕತಾ, ಏ.12- ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಶಿರಚ್ಚೇದ ಮಾಡಿದರೆ, 11 ಲಕ್ಷ ರೂಪಾಯಿಗಳ ಇನಾಮು ನೀಡುವುದಾಗಿ ಪಶ್ಚಿಮ ಬಂಗಾಳದ ಬಿಜೆಪಿ ಯುವ ನಾಯಕ ಯೋಗೇಶ್ ವರ್ಷಣೆ ನೀಡಿರುವ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.  ಕೊಲ್ಕತಾದಿಂದ 180 ಕಿ.ಮೀ. ದೂರದಲ್ಲಿರುವ ವೀರ್‍ಭೂಮಿಯಲ್ಲಿ ಹುನುಮಾನ್ ಜಯಂತಿ ಪ್ರಯುಕ್ತ ನಡೆದ ರ್ಯಾಲಿ ವೇಳೆ ಪೊಲೀಸರು ವಿನಾಕಾರಣ ಬಲಪ್ರಯೋಗ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದು ಸಂದರ್ಭದಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯ ಯೋಗೇಶ್ ಈ ಪ್ರಚೋದನಾಕಾರಿ ಹೇಳಿಕೆ ನೀಡಿದರು.

ಪೊಲೀಸರು ಹನುಮಾನ್ ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರು ಅಸುರರಂತೆ ವರ್ತಿಸಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ರಾಕ್ಷಸಿ. ಪೊಲೀಸ್ ದೌರ್ಜನ್ಯದ ವಿಡಿಯೋ ದೃಶ್ಯಗಳನ್ನು ನೋಡಿ ನನ್ನ ರಕ್ತ ಕುದಿಯಿತು. ಯಾರಾದರೂ ಮಮತಾ ಬ್ಯಾನರ್ಜಿಯವರ ತಲೆ ಕಡಿದರೆ ನಾನು 11 ಲಕ್ಷ ರೂಪಾಯಿಗಳ ಇನಾಮು ನೀಡುತ್ತೇನೆ ಎಂದು ಯೋಗೇಶ್ ನೀಡಿರುವ ಹೇಳಿಕೆ ಟಿಎಂಸಿ ಮುಖಂಡರನ್ನು ಕೆರಳಿಸಿದೆ.   ಪಶ್ಚಿಮಬಂಗಾಳದಲ್ಲಿ ಬಿಜೆಪಿ ಮತ್ತು ಟಎಂಸಿ ಕಾರ್ಯಕರ್ತರ ನಡುವೆ ಅಗಾಗ ಹಿಂಸಾಚಾರ ಮರುಕಳಿಸುತ್ತಿರುವ ಸಂದರ್ಭದಲ್ಲೇ ಯುವ ನಾಯಕನ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin