ಹಾಸನದಲ್ಲಿ ಏ.27 ರಿಂದ 29ರ ವರೆಗೆ ಏರ್‍ಮನ್ ಹುದ್ದೆಗಳಿಗೆ ನೇಮಕಾತಿ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

jobs

ಬೆಂಗಳೂರು, ಏ.12- ಹಾಸನದಲ್ಲಿ ಏ.27 ರಿಂದ 29ರ ವರೆಗೆ ಭಾರತೀಯ ವಾಯುಪಡೆಯ ಏರ್‍ಮನ್ ಹುದ್ದೆಗಳಿಗೆ ನೇಮಕಾತಿ  ನಡೆಯಲಿದೆ.ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ರ್ಯಾಲಿಯಲ್ಲಿ ಗ್ರೂಪ್ ವೈ ಟ್ರೇಡ್‍ಗಳ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್, ಐಎಎಫ್ (ಪೊಲೀಸ್)) ಏರ್‍ಮೆನ್ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.1997ರ ಜುಲೈ 7 ರಿಂದ 2000ದ ಡಿಸೆಂಬರ್ 20ರ ನಡುವೆ ಜನಿಸಿದ ಕನಿಷ್ಠ 165 ಸೆಂ.ಮೀ. ಎತ್ತರದ ಕರ್ನಾಟಕ ರಾಜ್ಯದ ಅವಿವಾಹಿತ ಪುರುಷರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳ ಬಹುದು.

ಅಭ್ಯರ್ಥಿಗಳು ಇಂಟರ್‍ಮೀಡಿಯೆಟ್, ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಶಿಕ್ಷಣ ಮಂಡಳಿಗಳು ಅನುಮೋದಿಸಿದ ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ. 50ರಷ್ಟು ಸರಾಸರಿ ಅಂಕ ಹಾಗೂ ಇಂಗ್ಲಿಷ್‍ನಲ್ಲಿ ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.ಹೆಚ್ಚಿನ ಮಾಹಿತಿಗೆ ಭಾರತೀಯ ವಾಯುಪಡೆಯ ವೆಬ್‍ಸೈಟ್ ಅಥವಾ ಜಿಲ್ಲಾ ಉದ್ಯೋಗಾಧಿಕಾರಿಗಳನ್ನು ಸಂಪರ್ಕಿ ಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin