242 ಕೆಜಿ ತೂಕ ಇಳಿಸಿಕೊಂಡ ಎಮಾನ್..!

ಈ ಸುದ್ದಿಯನ್ನು ಶೇರ್ ಮಾಡಿ

242

ಮುಂಬೈ, ಏ.12-ಐನೂರು ಕಿಲೋ ಗಜಗಾತ್ರದ ತೂಕದಿಂದ ಈ ಹಿಂದೆ ವಿಶ್ವದ ಅತ್ಯಂತ ದಢೂತಿ ಮಹಿಳೆ ಎಂದು ಗುರುತಿಸಿಕೊಂಡಿದ್ದ ಈಜಿಪ್ಟ್‍ನ  ಮೈ ಭಾರ ಈಗ ಅರ್ಧದಷ್ಟು ಕಡಿಮೆಯಾಗಿದೆ. ಮುಂಬೈನ ಆಸ್ಪತ್ರೆಯೊಂದರಲ್ಲಿ ಬ್ಯಾರಿಯಾಟ್ರಿಕ್ ಚಿಕಿತ್ಸೆಗೆ ಒಳಗಾಗಿರುವ ಈಕೆಯ ಈಗಿನ ತೂಕ 242 ಕೆಜಿಗಳು.ಈಕೆ ದೇಹ ತೂಕ ಅರ್ಧದಷ್ಟು ಇಳಿದಿರುವುದನ್ನು ಖ್ಯಾತ ಬ್ಯಾರಿಯಾಟ್ರಿಕ್ ಸರ್ಜನ್ ಡಾ ಮುಫಜಲ್ ಲಕ್ಡಾವಾಲಾ ಖಚಿತಪಡಿಸಿದ್ದಾರೆ. ಫೆಬ್ರವರಿ 11 ರಂದು ಈಕೆ ಮುಂಬೈಗೆ ಆಗಮಿಸಿದ್ದಾಗ ಈಕೆಯ ತೂಕ 490 ಕೆಜಿ ಇತ್ತು. ಕಟ್ಟುನಿಟ್ಟಿನ ದ್ರವಾಹಾರ ಮತ್ತು ಫಿಸಿಯೋಥೆರಪಿ ಮೂಲಕ ಕೆಲವು ದಿನಗಳಲ್ಲಿ ಮೈಭಾರ 100 ಕಿಲೋ ಇಳಿಯಿತು.

ಮಾರ್ಚ್ 7ರಂದು ಲ್ಯಾಪರೋಸ್ಕೋಪಿಕ್ ಸ್ಲೀವ್ ಗ್ಯಾಸ್ಟ್ರೋಕ್ಟಮಿ ಚಿಕಿತ್ಸೆಗೆ ಎಮಾನ್ ಒಳಗಾಗಿದ್ದರು. ನಂತರ ಮಾ.29ರಂದು 340 ಕೆಜಿ ತೂಕ ಹೊಂದಿದ್ದರು. ಭಾರೀ ಗಾತ್ರದ ದೇಹ ತೂಕದಿಂದ ಕಳೆದ 20 ವರ್ಷಗಳಲ್ಲಿ ಒಂದೇ ಕೊಠಡಿಯಲ್ಲಿ ಕಾಲ ದೂಡಿದ್ದ ಎಮಾನ್ ಮುಖದಲ್ಲಿ ಈಗ ಮಂದಹಾಸ ಮೂಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin