ಆಹಾರ ಅರಸಿ ಬಂದು ನಿತ್ರಾಣಗೊಡಿದ್ದ ಆನೆಗೆ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

elephant

ಕನಕಪುರ, ಏ.13- ಆಹಾರ ಅರಸಿ ಕಾಡಿನಿಂದ ಬಂದ ಆನೆಯೊಂದು ನಿತ್ರಾಣವಾಗಿ ಬಿದ್ದಿರುವ ಘಟನೆ ಸಾತನೂರು ಹೋಬಳಿ ದೇವೀರಮ್ಮನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣಾರೆಡ್ಡಿ ಎಂಬುವರ ಜಮೀನಿನಲ್ಲಿ ಆನೆ ತೀವ್ರ ನಿತ್ರಾಣಗೊಂಡು ಬಿದ್ದಿರುವುದು ಇಂದು ಬೆಳ್ಳಗ್ಗೆ ಜಮೀನಿನ ಮಾಲೀಕರ ಗಮನಕ್ಕೆ ಬಂದಿದೆ. ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆ ಜಮೀನಿನಲ್ಲಿರುವುದನ್ನು ಕಂಡ ಜನರು ಕೂಡಲೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದ್ದು, ಆಹಾರ ಸಿಗದೆ ಆನೆ ನಿತ್ರಾಣವಾಗಿದೆ.

ಬನ್ನೇರುಘಟ್ಟ ಅರಣ್ಯ ಇಲಾಖೆಯಿಂದ ತಜ್ಞರನ್ನು ಕರೆಸಿ ಹೆಚ್ಚಿನ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಶಿವಣ್ಣ, ಜಿಲ್ಲಾ ಅರಣ್ಯಾಧಿಕಾರಿ ಕುಮಾರ್, ಸಬ್‍ಇನ್ಸ್‍ಪೆಕ್ಟರ್ ಜಯರಾಮರೆಡ್ಡಿ ನೇತೃತ್ವದಲ್ಲಿ ಆನೆಗೆ ಆರೈಕೆ ಮಾಡಲಾಗುತ್ತಿದೆ. ಬನ್ನೇರುಘಟ್ಟ ಅರಣ್ಯ ತಜ್ಞರ ಭೇಟಿಗಾಗಿ ನಿರೀಕ್ಷಿಸಲಾಗುತ್ತಿದೆ.  ಆನೆ ಬಂದಿರುವ ವಿಷಯ ತಿಳಿದ ಸುತ್ತಮುತ್ತಲಿನ ಜನ ತಂಡೋಪ ತಂಡವಾಗಿ ಬಂದು ಆನೆ ನೋಡಿಕೊಂಡು ಹೋಗುತ್ತಿದ್ದು, ಸ್ಥಳದಲ್ಲಿ ಜನಜಂಗುಳಿಯೇ ನೆರೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin