ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಶೀಲ ಶಂಕಿಸಿ ಮನಬಂದಂತೆ ಇರಿದು ಕೊಂದ..!

ಈ ಸುದ್ದಿಯನ್ನು ಶೇರ್ ಮಾಡಿ

Marriage-Murder--01

ಬೆಂಗಳೂರು, ಏ.13- ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿದ ಪತಿ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ತಲಘಟ್ಟಪುರದ ಲೈಬ್ರರಿ ರಸ್ತೆಯ ಗೋವಿಂದಪ್ಪ ಬಿಲ್ಡಿಂಗ್‍ನಲ್ಲಿ ವಾಸವಾಗಿದ್ದ ವಸಂತಮ್ಮ (31) ಕೊಲೆಯಾದ ಮಹಿಳೆ.  ಹದಿನಾಲ್ಕು ವರ್ಷದ ಹಿಂದೆ ಮುನಿರಾಜು ಎಂಬಾತ ವಸಂತಮ್ಮಳನ್ನು ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಬ್ಯೂಟಿಪಾರ್ಲರ್‍ವೊಂದರಲ್ಲಿ ವಸಂತಮ್ಮ ಕೆಲಸ ಮಾಡುತ್ತಿದ್ದರು. ಪತಿ ಮುನಿರಾಜು ಆಟೋಚಾಲಕನಾಗಿದ್ದು, ಪತ್ನಿಯ ಶೀಲದ ಬಗ್ಗೆ ಪದೇ ಪದೇ ಶಂಕೆ ವ್ಯಕ್ತಪಡಿಸಿ ಜಗಳವಾಡುತ್ತಿದ್ದನಲ್ಲದೆ. ತಾನು ಮಾಡಿದ ಸಾಲ ತೀರಿಸಲಾಗದೆ ಈ ವಿಚಾರವಾಗಿಯೂ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ.

ರಾತ್ರಿ 10.30ರ ಸಮಯದಲ್ಲಿ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡ ಮುನಿರಾಜು ಪತ್ನಿಗೆ ಮನಬಂದಂತೆ ದೇಹದ ವಿವಿಧೆಡೆ ಇರಿದಿದ್ದರಿಂದ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ವಸಂತಮ್ಮ ಸಾವನ್ನಪ್ಪಿದ್ದಾಳೆ.
ಸುದ್ದಿ ತಿಳಿದ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿ ಮುನಿರಾಜುನನ್ನು ಬಂಧಿಸಿ ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin