ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಉತ್ತರ ಕೊರಿಯಾ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

North-Korea--01

ವಾಷಿಂಗ್ಟನ್, ಏ.13- ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಎಚ್ಚರಿಕೆ ಮತ್ತು ಅಮೆರಿಕ ದಾಳಿ ಮುನ್ಸೂಚನೆಯನ್ನು ಲೆಕ್ಕಿಸದೆ ಉತ್ತರ ಕೊರಿಯಾ ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಜ್ಜಾಗಿದ್ದು , ಆತಂಕ ಸೃಷ್ಟಿಯಾಗಿದೆ. ಪುನ್‍ಗ್ಗಯೆ-ರಿ ಅಣ್ವಸ್ತ್ರ ಪರೀಕ್ಷೆ ಸ್ಥಳದಲ್ಲಿ ಒಂದು ಪ್ರಬಲ ಅಣು ಕ್ಷಿಪಣಿಯ ಉಡಾವಣೆಗೆ ಉತ್ತರ ಕೊರಿಯ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ದಿ 38 ನಾರ್ತ್ ಮಾನಿಟರಿಂಗ್ ಗ್ರೂಪ್ ವರದಿ ಮಾಡಿದೆ. ಈ ಪರೀಕ್ಷಾ ಸ್ಥಳವು ಅಣ್ವಸ್ತ್ರ ಪ್ರಯೋಗಕ್ಕೆ ಸಜ್ಜಾಗಿದ್ದು ಅಮೆರಿಕ ಸೇರಿದಂತೆ ವೈರಿ ರಾಷ್ಟ್ರಗಳಿಗೆ ನೀಡಲಿರುವ ಮತ್ತೊಂದು ಸುತ್ತಿನ ಗಂಭೀರ ಎಚ್ಚರಿಕೆಯಾಗಲಿದೆ ಎಂದು ವಿಶ್ಲೇಷಣಾ ಸಮೂಹ ಬಣ್ಣಿಸಿದೆ.

ಇತ್ತೀಚೆಗಷ್ಟೇ ಉತ್ತರಕೊರಿಯಾ ನಾಲ್ಕು ಅಣ್ವಸ್ತ್ರ ಕ್ಷಿಪಣಿಗಳನ್ನು ಪ್ರಯೋಗಾರ್ಥವಾಗಿ ಉಡಾವಣೆ ಮಾಡಿತ್ತು. ಇವುಗಳಲ್ಲಿ ಮೂರು ಕ್ಷಿಪಣಿ ಜಪಾನ್ ಸಾಗರ ಪ್ರದೇಶದಲ್ಲಿ ಬಿದ್ದಿತು. ಇದು ಅಮೆರಿಕಾಗೆ ನಾವು ನೀಡುವ ಎಚ್ಚರಿಕೆ ಎಂದು ಸರ್ವಾಧಿಕಾರಿ ಕಿಮ್ ಜುಂಗ್ ಉನ್ ತಿಳಿಸಿದ್ದರು.  ಕೊರಿಯಾದ ದ್ವೀಪಕಲ್ಪದಲ್ಲಿ ಈಗಾಗಲೇ ಅಮೆರಿಕದ ನೌಕಾಪಡೆಯ ಆಕ್ರಮಣಕಾರಿ ಸಮೂಹ ಲಂಗರು ಹಾಕಿದ್ದು, ಇದೇ ಸಂದರ್ಭದಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಪಯೊಂಗ್‍ಯಾಂಗ್ ಸಿದ್ದತೆ ನಡೆಸಿರುವುದು ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin