ರಾಸಾಯನಿಕ ಅಸ್ತ್ರ ಪ್ರಯೋಗ ಅಪರಾಧ : ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Chemical-Attack--01

ವಾಷಿಂಗ್ಟನ್, ಏ.14- ಸಿರಿಯಾ ಸರ್ಕಾರವು ಕಳೆದ ವಾರ ನಾಗರಿಕರ ಮೇಲೆ ನಡೆಸಿದೆ ಎನ್ನಲಾದ ರಾಸಾಯನಿಕ ಅಸ್ತ್ರಗಳ ದಾಳಿಯು ಯುದ್ಧ ಅಪರಾಧಕ್ಕೆ ಕಾರಣವಾಗುತ್ತದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ.  ನಾಗರಿಕರ ಮೇಲೆ ಕೆಮಿಕಲ್ ವೇಪನ್‍ಗಳಿಂದ ಆಕ್ರಮಣ ನಡೆದಿದೆ ಎಂಬುದು ಸುಳ್ಳು. ಸಿರಿಯಾ ಮೇಲೆ ದಾಳಿ ನಡೆಸುವ ಏಕೈಕ ಉದ್ದೇಶದಿಂದ ಅಮೆರಿಕ ಈ ಕಟ್ಟುಕತೆಯನ್ನು ಸೃಷ್ಟಿಸಿದೆ ಎಂದು ಅಧ್ಯಕ್ಷ ಬಶರ್ ಅಲ್-ಅಸಾದ್ ಹೇಳಿಕೆ ನೀಡಿದ ಬೆನ್ನಲ್ಲೇ ಅಮೆರಿಕದಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಪ್ಪು ಮಾಡಿರುವ ಸಿರಿಯಾ ಅಧ್ಯಕ್ಷರು ತಮ್ಮ ಕೃತ್ಯವನ್ನು ಮರೆಮಾಚಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಗರಿಕರ ಮೇಲೆ ಸೇನಾ ಪಡೆಗಳು ದಾಳಿ ನಡೆಸಿದರೆ ಅದು ಯುದ್ಧ ಅಪರಾಧವಾಗುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಹೇಳಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin