1.10 ಕೋಟಿ ರೂ. ಹಳೆ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

Notes02

ಗುವಾಹತಿ, ಏ.14-ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಿಆರ್‍ಪಿಎಫ್ ಮತ್ತು ಅಸ್ಸಾಂ ರಾಜ್ಯ ಪೊಲೀಸರು 1.10 ಕೋಟಿ ರೂ. ಮುಖಬೆಲೆಯ ಹಳೆ ನೋಟುಗಳು, ಒಂಭತ್ತು ಚಿನ್ನದ ಗಟ್ಟಿಗಳು ಹಾಗೂ 1.5 ಕೆಜಿ ಬ್ರೌನ್ ಶುಗರ್‍ನನ್ನು ಗುವಾಹತಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಗುವಾಹತಿಯ ಪಲ್ಟಾನ್ ಬಜಾರ್‍ನಲ್ಲಿ ವಾಹನವೊಂದರಿಂದ 1,000 ರೂ. ಮತ್ತು 500 ರೂ.ಗಳ ಹಳೆ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು. ಚಾಲಕ ಪರಾರಿಯಾಗಿದ್ದು ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಗುವಾಹತಿ ರೈಲು ನಿಲ್ದಾಣದಲ್ಲಿ ಮೂವರನ್ನು ಬಂಧಿಸಿ 15 ಕೆಜಿ ತೂಕದ ಒಂಭತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವಧ್ ಎನ್‍ಇ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿ, 1.5 ಕೆಜಿ ಬ್ರೌನ್ ಶುಗರ್‍ನನ್ನು ವಶಪಡಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin