ಅಮೂಲ್ಯ ಆಹ್ವಾನ ಪತ್ರಿಕೆ ರೆಡಿ, ಆದಿಚುಂಚನಗಿರಿಯಲ್ಲಿ ಮೇ 12ರಂದು ಮುಹೂರ್ತ

ಈ ಸುದ್ದಿಯನ್ನು ಶೇರ್ ಮಾಡಿ

Amulya--01

ಬೆಂಗಳೂರು. ಎ.15 : ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ- ಜಗದೀಶ್ ಅವರ ಭರ್ಜರಿ ತಯಾರಿ ನಡೆದಿದ್ದು ಆಹ್ವಾನ ಪತ್ರಿಕೆ ಮುದ್ರಣವಾಗಿದ್ದು ಸಂಬಂಧಿಕರ, ಆತ್ಮೀಯರ ಕೈಸೇರಿದೆ.  ಮೇ 11 ರಂದು ಚಪ್ಪರಶಾಸ್ತ್ರ ನಡೆಯಲಿದ್ದು, 12 ರಂದು ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ನ ಶ್ರೀ ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಲಿದೆ. ಈಗಾಗಲೇ ಮೊದಲ ಪತ್ರಿಕೆಯನ್ನು ದೇವರಿಗೆ ಅರ್ಪಿಸಿ, ಬಂಧು ಬಾಂಧವರಿಗೆ, ಆತ್ಮೀಯರಿಗೆ ಹಂಚಿಕೆ ಮಾಡುತ್ತಿದ್ದಾರೆ.


ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ, ಕುಟುಂಬದವರು, ಆತ್ಮೀಯರ ಸಮ್ಮುಖದಲ್ಲಿ ಅಮೂಲ್ಯ ಹಾಗೂ ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  ಮೇ 16 ರಂದು ಕನಕಪುರ ರಸ್ತೆಯ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಮೇ 21 ರಂದು ಬೀಗರ ಔತಣಕೂಟ ಏರ್ಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin