ತುಮಕೂರು : ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ವೃದ್ಧೆ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire-Girl-Suicide

ತುಮಕೂರು, ಏ.15-ಮನೆಗೆ ಆಕಸ್ಮಿಕ ಬೆಂಕಿ ಬಿದ್ದ ಕಾರಣ ವೃದ್ಧೆಯೊಬ್ಬರು ಸಜೀವವಾಗಿ ದಹನವಾಗಿರುವ ಘಟನೆ ಇಂದು ಬೆಳಗಿನ ಜಾವ ತಿಪಟೂರು ತಾಲೂಕಿನ ರಾಮಶೆಟ್ಟಿ ಹಳ್ಳಿಯಲ್ಲಿ ನಡೆದಿದೆ. ಪಾರ್ವತಮ್ಮ (65) ಮೃತ ದುರ್ದೈವಿ. ಬೆಳಗಿನ 3.30ರ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ  ಮನೆಯಲ್ಲೆಲ್ಲಾ ಆವರಿಸಿದೆ. ಮನೆಯಲ್ಲಿದ್ದ ವೃದ್ಧೆ ಪಾರ್ವತಮ್ಮ ಹೊರಬರಲಾದರೆ ಸಜೀವ ದಹನವಾಗಿದ್ದಾರೆ. ಮನೆಯಲ್ಲಿದ್ದ ಮೊಮ್ಮಕ್ಕಳು ಊರಿಗೆ ತೆರಳಿದ್ದ ಕಾರಣ ಅವರು ಬದುಕುಳಿದಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದೆ. ತಿಪಟೂರು ಗ್ರಾಮಾಂತರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin