ಪಂಕ್ತಿ ಭೋಜನ ಸವಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Sadananda-Gowda--01

ಕೆಆರ್‍ಪುರ, ಏ.15- ನಾವೆಲ್ಲರೂ ಒಂದೇ ಎಂಬ ಭಾವನೆ ಬಂದಾಗ ಮಾತ್ರ ಸಮಾಜದಲ್ಲಿ ಸಾಮರಸ್ಯ ನಿರ್ಮಾಣವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತ್ಯುತ್ಸವ ಅಂಗವಾಗಿ ಹೊರಮಾವು ಬಳಿಯ ವಿಬ್‍ಗಯಾರ್ ಶಾಲೆ ಬಳಿ ಹಮ್ಮಿಕೊಂಡಿದ್ದ ಸಹಪಂಕ್ತಿ ಭೋಜನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಸಮಾಜದಲ್ಲಿ ಅಲ್ಲಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬರುತ್ತಿದೆ.



ಈ ದೌರ್ಜನ್ಯ ತೊಲಗಬೇಕಾದರೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂದು ಹೇಳಿದರು. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಆರ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಒಂದೆಡೆ ಸೇರಿಸಿ ಅವರೊಂದಿಗೆ ಊಟ ಮಾಡುವ ಆಲೋಚನೆ ಮಾಡಿದ ಮಾಜಿ ಶಾಸಕ ನಂದೀಶ್‍ರೆಡ್ಡಿ  ಅವರ ಆಲೋಚನೆ ಸಂತಸ ತಂದಿದೆ ಎಂದು ತಿಳಿಸಿದರು.

ಆರೂವರೆ ದಶಕದ ನಂತರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಎರಡು ದಿನ ಚರ್ಚೆಗೆ ಬಂದಿದ್ದು, ಅವರ ಹುಟ್ಟೂರು ಅಭಿವೃದ್ಧಿ ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದೆ ಬಂದಿದೆ ಎಂದು ತಿಳಿಸಿದರು.  ಮಾಜಿ ಶಾಸಕ ನಂದೀಶ್‍ರೆಡ್ಡಿ, ಪಾಲಿಕೆ ಸದಸ್ಯರಾದ ಪೂರ್ಣಿಮಾ ಶ್ರೀನಿವಾಸ್, ಬಂಡೆರಾಜು, ಮಾಜಿ ಸದಸ್ಯರಾದ ಗೀತಾ, ಮಂಜುಳಾ, ಸಿದ್ದಲಿಂಗಯ್ಯ, ಕ್ಷೇತ್ರಾಧ್ಯಕ್ಷ ಚಿದಾನಂದ, ಮುಖಂಡರಾದ ರಮೇಶ್, ಸುಂದರ್ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin