ಪ್ರತಾಪ್‍ಸಿಂಹ – ಪ್ರಿಯಾಂಕ ಖರ್ಗೆ ನಡುವೆ ಟ್ವೀಟ್ ವಾರ್

ಈ ಸುದ್ದಿಯನ್ನು ಶೇರ್ ಮಾಡಿ

Twitter--01

ಮೈಸೂರು, ಏ.15- ನಂಜನಗೂಡು-ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆ ಫಲಿತಾಂಶ ಬಂದ ನಂತರ ಗೆದ್ದ ಖುಷಿಯಲ್ಲಿರುವ ಕೈ ನಾಯಕರು, ಬಿಜೆಪಿ ನಾಯಕರನ್ನು ಟೀಕಿಸುವ ಸಂದರ್ಭದಲ್ಲಿ ಪೇಚಿಗೆ ಸಿಲುಕಿದ್ದಾರೆ. ಸಂಸದ ಪ್ರತಾಪ್‍ಸಿಂಹ ಹಾಗೂ ಸಚಿವ ಪ್ರಿಯಾಂಕ ಖರ್ಗೆ ನಡುವೆ ನಡೆದಿರುವ ಟ್ವೀಟರ್ ವಾರ್ ಹಾದಿಬೀದಿ ರಂಪವಾಗಿದೆ.  ಉಪಚುನಾವಣೆ ಫಲಿತಾಂಶ ಬಂದಾಗಿದೆ. ಇದೇ ಖುಷಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ದೆಹಲಿಗೆ ತೆರಳಿದ್ದರೆ, ಇತ್ತ ಸಚಿವ ಪ್ರಿಯಾಂಕ್‍ಖರ್ಗೆ, ಸಂಸದ ಪ್ರತಾಪ್‍ಸಿಂಹ ಅವರೊಂದಿಗೆ ಟ್ವೀಟರ್ ಫೈಟ್ ಶುರುವಿಟ್ಟುಕೊಂಡಿದ್ದಾರೆ.

ಚುನಾವಣೆ ಪ್ರಚಾರದಲ್ಲೆಲ್ಲಾ ವಿನಯತೆಯನ್ನು ಪ್ರದರ್ಶಿಸಿ ಯಾರೊಬ್ಬರ ಬಗ್ಗೆಯೂ ಏನೂ ಮಾತನಾಡದೆ, ಹಮ್ಮುಬಿಮ್ಮನ್ನು ಮಾಡದೆ ಚುನಾವಣೆ ಗೆದ್ದ ಕಾಂಗ್ರೆಸ್ ನಾಯಕರು ಈಗ ಟೀಕೆ ಮಾಡಲು ಶುರು ಮಾಡಿದ್ದಾರೆ.  ಸಚಿವ ಪ್ರಿಯಾಂಕ್ ಖರ್ಗೆ , ಚುನಾವಣೆಯಲ್ಲಿ ವಿನಯತೆ ಇಲ್ಲದವರಿಗೆ ಜನರು ಪಾಠ ಕಲಿಸಿದ್ದಾರೆ. ಪೇಪರ್ ಪ್ರತಾಪ್‍ಸಿಂಹಗೆ ಕೆಲಸಕ್ಕಿಂತಲೂ ವಿಡಂಬಣೆ ಮಾಡುವುದರಲ್ಲಿ ನಂಬಿಕೆ ಜಾಸ್ತಿ ಎಂದು ಟ್ವೀಟ್ ಮೂಲಕ ಟೀಕಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರತಾಪ್‍ಸಿಂಹ ಅವರು ನೀನು ಹಾಗೂ ನಿನ್ನ ತಂದೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ನೋಡೋಣ. ನಿನಗೇ ಚೆನ್ನಾಗಿ ಗೊತ್ತು ನಿನ್ನೆ ತಂದೆ ಸರ್‍ನೇಮ್ ಏನು ಎನ್ನುವುದು ಎಂದು ಪ್ರಶ್ನಿಸಿದರು.

 

ಜನರಲ್ ಸೀಟ್‍ನಡಿ ನಾನು ನಿನ್ನ ವಿರುದ್ಧ ಸ್ಪರ್ಧಿಸಲು ಸಿದ್ಧ. ನನ್ನ ಬದ್ಧತೆಯ ಕೆಲಸ ನೋಡಿದ ಜನರು ನಿನ್ನ ಅದೃಷ್ಟವನ್ನೇ ಬದಲಾಯಿಸುತ್ತಾರೆ ಅಂತ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದರು.  ಇದಕ್ಕೆ ಪ್ರತಿ ಟ್ವೀಟ್ ಮಾಡಿದ ಪ್ರತಾಪ್‍ಸಿಂಹ, ನಿಮ್ಮ ತಂದೆ ನನ್ನ ವಿರುದ್ಧ ನಿಂತು ಗೆಲ್ಲಲಿ ನೋಡೋಣ. ನನ್ನ ವಿರುದ್ಧ ನಿಂತರೆ ಮೀಸಲಾತಿ ಸೀಟನ್ನು ಕಳೆದುಕೊಳ್ಳಬೇಕಾದೀತು ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಗೆದ್ದವರ ಸಂತೋಷವೋ, ಸೋತವರ ಹತಾಶ ಮನೋಭಾವವೋ ಈ ರೀತಿ ಟ್ವೀಟರ್‍ನಲ್ಲಿ ಪರಸ್ಪರ ನಿಂದಿಸಿಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ, ಟೀಕೆಗಳಿಗೆ ವೇದಿಕೆ ಮಾಡಿಕೊಳ್ಳಬಾರದು. ಗೆಲುವನ್ನು ಅಭಿನಂದಿಸಬೇಕು, ಸೋಲನ್ನು ಸ್ವೀಕರಿಸಬೇಕು ಇದೇ ನಮ್ಮ ಪ್ರಜಾಪ್ರಭುತ್ವ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin