ಬಾಂಬ್ ನಾಗನ ಆಸ್ತಿ, ವಹಿವಾಟಿನ ಸಮಗ್ರ ಜಾತಕ ಜಾಲಾಡುತ್ತಿದ್ದಾರೆ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--012

ಬೆಂಗಳೂರು, ಏ.15- ಬ್ಲಾಕ್ ಆ್ಯಂಡ್ ವೈಟ್ ದಂಧೆ ನಡೆಸುತ್ತಿದ್ದ ಪಾಲಿಕೆ ಮಾಜಿ ಸದಸ್ಯ ಬಾಂಬ್‍ನಾಗನ ಆಸ್ತಿ, ವಹಿವಾಟಿನ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಎಲ್ಲೆಲ್ಲಿ ರೆಸಾರ್ಟ್ ಹೊಂದಿದ್ದಾನೆ, ಫಾರಂ ಹೌಸ್‍ಗಳು ಎಲ್ಲೆಲ್ಲಿವೆ, ಎಲ್ಲೆಲ್ಲಿ ನಿವೇಶನಗಳನ್ನು ಮಾಡಿದ್ದಾನೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.   [ ಇದನ್ನೂ ಓದಿ :   ಇನ್ನೂ ಸಿಗದ ಬಾಂಬ್ ‘ನಾಗ’, ಬಿಲಗಳಲ್ಲಿ ಪೊಲೀಸರ ಹುಡುಕಾಟ  ] ಈತ ನೆಲಮಂಗಲ, ದೇವನಹಳ್ಳಿ, ತಮಿಳುನಾಡಿನಲ್ಲಿ ಆಸ್ತಿಹೊಂದಿದ್ದಾನೆ ಎಂದು ಹೇಳಲಾಗುತ್ತಿದ್ದು, ಆ ಬಗ್ಗೆ ದಾಖಲೆಗಳಿಗಾಗಿ ಪರಿಶೀಲನೆ ಕೈಗೊಂಡಿದ್ದಾರೆ.



ನಿನ್ನೆ ಪೊಲೀಸರು ಆತನ ಮನೆ, ಕಚೇರಿ ಮೇಲೆ ದಾಳಿ ನಡೆಸಿದಾಗ ಪತ್ತೆಯಾಗಿರುವ ಭೂ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈತನ ವಹಿವಾಟು ಏನು? ಯಾರ್ಯಾರೊಂದಿಗೆ ಹಣದ ವ್ಯವಹಾರ ನಡೆಸುತ್ತಿದ್ದಾನೆ? ಎಷ್ಟು ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದ್ದಾನೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.   [ ಇದನ್ನೂ ಓದಿ : ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗನ ವಿರುದ್ಧ ಕೋಕಾ ಕಾಯ್ದೆ..? ] ದಾಬಸ್‍ಪೇಟೆಯಲ್ಲೂ ಈತ ರೆಸಾರ್ಟ್ ಹೊಂದಿರುವುದಾಗಿ ಹೇಳಲಾಗುತ್ತಿದ್ದು, ಆ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.   [ ಇದನ್ನೂ ಓದಿ : ಬ್ಲಾಕ್ ಆ್ಯಂಡ್ ವೈಟ್ ದಂಧೆ : ನಾಗನ ವಿರುದ್ಧ ಡಿಸೆಂಬರ್‍ನಲ್ಲೇ ದೂರು ದಾಖಲು ]

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin