ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗನ ವಿರುದ್ಧ ಕೋಕಾ ಕಾಯ್ದೆ..?

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--07

ಬೆಂಗಳೂರು, ಏ.15- ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಅಲಿಯಾಸ್ ಬಾಂಬ್ನಾಗನ ವಿರುದ್ಧ ಕೋಕಾಕಾಯ್ದೆಯಡಿ ಕೇಸ್ ದಾಖಲಿಸಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ನಿನ್ನೆ ನಾಗನ ಮನೆ ಮೇಲೆ ದಾಳಿ ಮಾಡಿದಾಗ 14.80 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ ನೋಟುಗಳು, ಬೇರೆಯವರ ಹೆಸರಿನಲ್ಲಿರುವ ಭೂ ದಾಖಲೆಗಳು, ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.



ಈತ ಬಹಳ ದಿನಗಳಿಂದಲೂ ಸಹ ದಂಧೆ ನಡೆಸಿರುವುದು ಕಂಡು ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.  ಈತನ ಚಟುವಟಿಕೆಗಳು ಏನು, ಈತನ ಬಳಿ ಬೇರೆಯವರ ಹೆಸರಿನ ಭೂದಾಖಲೆಗಳು ಹೇಗೆ ಬಂತು, ಅಮಾನ್ಯಗೊಂಡ ನೋಟುಗಳು ಹೇಗೆ ಬಂತು ಎಂಬ ಬಗ್ಗೆ ಆತ ಸಿಕ್ಕಿಬಿದ್ದ ನಂತರವಷ್ಟೇ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ದಾಳಿ ವೇಳೆ ನಾಗನ ಕಚೇರಿಯಲ್ಲಿ ಅಮಾನ್ಯಗೊಂಡ ನೋಟುಗಳು ತುಂಬಿದ್ದ ಬ್ಯಾಗುಗಳು, ಮಂಚದಲ್ಲಿ ಹಾಸಿಗೆಯಂತೆ ಜೋಡಿಸಿಟ್ಟಿದ್ದ 14.80 ಕೋಟಿ ರೂ. ಮೊತ್ತದ ಹಳೇ ನೋಟುಗಳು, 2 ಡ್ರಾಗರ್, 3 ಮಚ್ಚುಗಳು ಬೇಸ್ಬಾಲ್ ಬ್ಯಾಟ್ಗಳು, ಹಲವು ಭೂ ದಾಖಲೆಗಳು ಪತ್ತೆಯಾಗಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin