ಮಾನಸಿಕ ಖಿನ್ನತೆ : ಸೀಮೆಎಣ್ಣೆ ಸುರಿದುಕೊಂಡು ಅಪ್ರಾಪ್ತೆ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

minor-suicide-girl
ಚನ್ನಪಟ್ಟಣ, ಏ.15– ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೊಳಗಾಗಿದ್ದ ಅಪ್ರಾಪ್ತಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಲ್ಲೂಕಿನ ಲಂಬಾಣಿದೊಡ್ಡಿ ಗ್ರಾಮದ ವೆಂಕಟೇಶ್ ಎಂಬುವರ ಮಗಳಾದ ಯೋಗಿತಾ (16) ಆತ್ಮಹತ್ಯೆ ಮಾಡಿಕೊಂಡಿರುವ ಅಪ್ರಾಪ್ತೆ.ಈಕೆ ತನ್ನ ಅಜ್ಜಿ ಚಿಕ್ಕತಾಯಮ್ಮಳ ಗ್ರಾಮ ಉಜ್ಜನಹಳ್ಳಿಗೆ ಹೋಗಿದ್ದಾಗ ದಾರುಣ ಅಂತ್ಯಕ್ಕೆ ಕೈಹಾಕಿದ್ದಾಳೆ. ಕೆಲ ದಿನಗಳಿಂದಲೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯೋಗಿತಾ 9ನೇ ತರಗತಿ ಓದುತ್ತಿದ್ದ ಸಂದರ್ಭದಲ್ಲಿಯೇ ಮನೆಯವರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮನೆಯಲ್ಲೇ ಇರಿಸಿದ್ದರೆನ್ನಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹೊತ್ತಿಸಿಕೊಂಡಿದ್ದಾಳೆ, ದೇಹಪೂರ್ತಿ ಆವರಿಸಿಕೊಂಡ ಬೆಂಕಿಯ ರೌದ್ರತೆಯಲ್ಲಿ ಉರಿ ತಡೆಯಲಾರದೆ ಸಹಾಯಕ್ಕಾಗಿ ಕೂಗಿದ್ದಾಳೆನ್ನಲಾಗಿದೆ.ಸ್ಥಳೀಯರು ಸಕಾಲದಲ್ಲಿ ಬಂದು ಆಕೆಗೆ ಆವರಿಸಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದ್ದರಾದರೂ ಅಷ್ಟೊತ್ತಿಗಾಗಲೇ ಶೇ.85ರಷ್ಟು ಬೆಂಕಿಗೆ ಆಹುತಿಯಾಗಿದ್ದ ಆಕೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾಳೆ.
ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin