ಮುನ್ನಾಭಾಯ್ ಗೆ ಮತ್ತೊಂದು ಸಂಕಟ, ಸಂಜು ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Sanjay-Datt--1

ಮುಂಬಯಿ. ಎ.15 : ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ ಮುನ್ನಾ ಭಾಯ್ ಮತ್ತೊಂದು ಸಂಕಟಕ್ಕೆ ಸಿಲುಕಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.  2002ರಲ್ಲಿ ನಟ ಸಂಜಯ್ ದತ್ ಅವರು ನೂರಾನಿಯವರ ಚಿತ್ರ ಜಾನ್ ಕಿ ಬಾಜಿಯಲ್ಲಿ ಚಿತ್ರದಲ್ಲಿ ನಟಿಸಲು 50 ಲಕ್ಷ ರೂ. ಪಡೆದಿದ್ದರು. ನಂತರ ಮುನ್ನ ಭಾಯ್ ಶೂಟಿಂಗ್ ಗೆ ಹೋಗಲಿಲ್ಲ ಮತ್ತು ಚಿತ್ರಕ್ಕೆ ಪಡೆದಿದ್ದ 50 ಲಕ್ಷ ರೂಪಾಯಿ ಸಂಭಾವನೆಯನ್ನೂ ವಾಪಸ್ ಕೊಟ್ಟಿರಲಿಲ್ಲ. ಆಗ ನೂರಾನಿ ನ್ಯಾಯಾಲಯದ ಮೊರೆ ಹೋದರು. ಮುಂಬೈ ಹೈಕೋರ್ಟ್ ದತ್ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿತು.

ಆ ಸಂದರ್ಭದಲ್ಲಿ ತಮಗೆ ಭೂಗತಲೋಕದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ನೂರಾನಿ ಅಂಧೇರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.  2013ರಲ್ಲಿ ಸಂಜಯ್ ದತ್ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದಾಗ ಜಾಮೀನುರಹಿತ ಬಂಧನದ ವಾರಂಟ್ ಹೊರಡಿಸಲಾಗಿತ್ತು. ಆದರೆ ನಂತರ ನ್ಯಾಯಾಲಯಕ್ಕೆ ದತ್ ಹಾಜರಾಗಿದ್ದರಿಂದ ವಾರಂಟ್ ನ್ನು ರದ್ದುಪಡಿಸಲಾಯಿತು.ನಂತರ ಸಂಜಯ್ ದತ್ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ 5 ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿತು.  ಸಂಜಯ್ ದತ್ ಜೈಲಿನಿಂದ ಹೊರಬಂದ ನಂತರ ನೂರಾನಿಯವರ ಪರ ವಕೀಲರು ಈ ವರ್ಷ ಫೆಬ್ರವರಿಯಲ್ಲಿ ನ್ಯಾಯಾಲಕ್ಕೆ ಹಾಜರಾಗುವಂತೆ ದತ್ ಅವರಿಗೆ ಆದೇಶ ನೀಡಲು ಮನವಿ ಸಲ್ಲಿಸಿದರು. ಸಂಜಯ್ ದತ್ ಅವರು ಜೈಲಿನಿಂದ ಹೊರಗಿರುವಾಗ, ಅವರು ನ್ಯಾಯಾಲಯಕ್ಕೆ ಹಾಜರಾಗಬೇಕು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂದು ಚಿತ್ರ ನಿರ್ಮಾಪಕ ನೂರಾನಿಯವರ ಪರ ವಕೀಲ ಆರೋಪಿಸಿದ್ದಾರೆ.

ಈ ಹಿಂದಿನ ಚೆಕ್‌–ಬೌನ್ಸ್‌ ಪ್ರಕರಣದ ಸಂಬಂಧವೂ ಸಂಜಯ್‌ ದತ್‌ ಮುಂಬೈ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ.  ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವುದನ್ನು ತಪ್ಪಿಸಿಕೊಂಡಿರುವ ಸಂಜಯ್ ದತ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಎಎನ್ಐನಲ್ಲಿ ಮಾಡಲಾಗಿರುವ ಟ್ವೀಟ್ ಪ್ರಕಾರ ನಟ ಸಂಜಯ್ ದತ್ ಚಿತ್ರ ನಿರ್ಮಾಪಕ ಶಕೀಲ್ ನೂರಾನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin