ಹೃತಿಕ್ ಜೊತೆ ಜಟಾಪಟಿ ನಡೆದಿಲ್ಲ : ಯಾಮಿ

ಈ ಸುದ್ದಿಯನ್ನು ಶೇರ್ ಮಾಡಿ

yami-hrutik

ಬಾಲಿವುಡ್ ಸೂಪರ್‍ಸ್ಟಾರ್ ಹೃತಿಕ್ ರೋಷನ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲ ಹೀಗಿರುವಾಗ ಜಟಾಪಟಿ ಮಾತೆಲ್ಲಿ? ಎಂದು ಮರು ಪ್ರಶ್ನೆ ಹಾಕಿದ್ದಾಳೆ. ಬಾಲಿವುಡ್ ನವನಟಿ ಯಾಮಿ ಗೌತಮ್. ಈ ಕುರಿತು ಬಿ-ಟೌನ್‍ನಲ್ಲಿ ಹಬ್ಬಿರುವ ವದಂತಿ-ಊಹಾಪೋಹಾಗಳನ್ನು ಯಾಮಿ ತಳ್ಳಿ ಹಾಕಿದ್ದಾಳೆ. ಕಾಬಿಲ್ ಸಿನಿಮಾದಲ್ಲಿ ಹೃತಿಕ್ ಮತ್ತು ಯಾಮಿ ಅಂಧ ಪ್ರೇಮಿಗಳಾಗಿ ಗಮನಸೆಳೆದಿದ್ದರು. ಇವರಿಬ್ಬರ ಕೆಮಿಸ್ಟ್ರಿ ಕೂಡ ಸಿನಿಮಾ ಯಶಸ್ವಿಗೆ ಕಾರಣವಾಗಿತ್ತು. ಅದರಲ್ಲೂ ಯಾಮಿ ಪಾತ್ರವನ್ನು ಚಿತ್ರರಸಿಕರು ಮತ್ತು ವಿಮರ್ಶಕರು ಪ್ರಶಂಸಿಸಿದ್ದರು. ಈ ಚಿತ್ರದ ಯಶಸ್ಸಿನ ಸಂಭ್ರಮ ಆಚರಿಸಲು ಒಂದು ಭರ್ಜರಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ 100 ಅಭಿಮಾನಿಗಳು, ಚಿತ್ರ ತಂಡ ಮತ್ತು ಬಾಲಿವುಡ್ ಗಣ್ಯರನ್ನು ಆಹ್ವಾನಿಸಲಾಗಿತ್ತು.

ಹೃತಿಕ್ ರೋಷನ್ ಸೇರಿದಂತೆ ಎಲ್ಲರೂ ಸಮಯಕ್ಕೆ ಸರಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಚಿತ್ರದ ಪ್ರಮುಖ ಆಕರ್ಷಣೆಯಾದ ಯಾಮಿ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಆಕೆ ಸಕಾಲದಲ್ಲಿ ಬರದ ಕಾರಣ ಸಿನಿಮಾ ತಂಡದ ಕೋಪ ನೆತ್ತಿಗೇರಿತ್ತು. ಎಲ್ಲ ಮುಗಿದ ಮೇಲೆ ಕೊನೆ ಕ್ಷಣದಲ್ಲಿ ಯಾಮಿ ಸಮಾರಂಭಕ್ಕೆ ಹಾಜರಾಗಿ ನಾಮ್‍ಕೇವಾಸ್ತೆ ಫೋಟೊಗೆ ಫೋಸು ನೀಡಿದಳು. ಕಾರ್ಯಕ್ರಮಕ್ಕೆ ತಡವಾಗಿ ಬಂದ ಯಾಮಿ ಮೇಲೆ ಹೃತಿಕ್ ಮುನಿಸಿಕೊಂಡು ಜಗಳವಾಡಿದ್ದಾನೆ ಎಂಬ ಸುದ್ದಿಯೂ ಹಬ್ಬಿತ್ತು. ಯಾಮಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಿಲ್ಲ ಪೂರ್ವ ನಿಗದಿತ ಇನ್ನೊಂದು ಕಾರ್ಯಕ್ರಮದಲ್ಲಿ ಆಕೆ ಭಾಗವಹಿಸಿದ್ದರಿಂದ ತಡವಾಗಿತ್ತು. ಇದನ್ನು ತಿಳಿಸಿ ಸಿನಿಮಾ ತಂಡದ ಮತ್ತು ಪ್ರೇಕ್ಷಕರ ಕ್ಷಮೆ ಕೋರಿದ್ದಳು ಯಾಮಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin