8 ಹೆಚ್ಚುವರಿ ಅಂಗಗಳನ್ನು ಹೊಂದಿದ್ದ ಇರಾಕ್ ಹಸುಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

Karam--Baby

ನವದೆಹಲಿ, ಏ.15-ಎಂಟು ಹೆಚ್ಚುವರಿ ಅಂಗಗಳನ್ನು ಹೊಂದಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರಾಕಿನ ಏಳು ತಿಂಗಳ ಮಗುವಿಗೆ ನೋಯ್ಡಾದ ಜೆ.ಪಿ. ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕರಮ್ ಎಂಬ ಹಸುಳೆ ಪಾಲಿಮೇಲಿಯಾ ಎಂಬ ಅಪರೂಪದ ದೇಹಲಕ್ಷಣದೊಂದಿಗೆ ಜನಿಸಿತ್ತು. ಇಂಥ ಶಿಶುಗಳಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಅವಯವಗಳು ಇರುತ್ತವೆ. ಕರಮ್‍ಗೆ ಎಂಟು ಹೆಚ್ಚುವರಿ ಅಂಗಗಳಿದ್ದು, ಇದರಲ್ಲಿ ಎರಡು ಉದರದಿಂದ ಹೊರಗೆ ಚಾಚಿದ ಸ್ಥಿತಿಯಲ್ಲಿದ್ದು, ದೇಹಾರೋಗ್ಯ ಗಂಭೀರವಾಗಿತ್ತು.

ಕರಮ್‍ನನ್ನು ಪ್ರಥಮ ಬಾರಿಗೆ ಚಿಕಿತ್ಸೆಗೆಂದು ಕರೆತಂದಾಗ ಆ ಶಿಶು ಜನಿಸಿ ಕೇವಲ 15 ದಿನಗಳಾಗಿದ್ದವು. ಮಗುವಿನ ಸ್ಥಿತಿ ಶೋಚನೀಯವಾಗಿತ್ತು. ಇದನ್ನು ಗಮನಿಸಿ ಆಸ್ಪತ್ರೆಯ ನುರಿತ ವೈದ್ಯರು ಮೂರು ಹಂತಗಳಲ್ಲಿ ಸಂಕೀರ್ಣ ಶಸ್ತ್ರಕ್ರಿಯೆ ನಡೆಸಲು ನಿರ್ಧರಿಸಿದರು ಎಂದು ಹಿರಿಯ ವೈದ್ಯ ಡಾ. ಗಿರೀಶ್ ರಾಥೋಡ್ ಹೇಳಿದ್ದಾರೆ.   ಮೊದಲ ಹಂತದಲ್ಲಿ ಮಗುವಿನ ಹೊಟ್ಟೆಯ ಹೊರಗೆ ಚಾಚಿಕೊಂಡಿದ್ದ ಎರಡು ಅಂಗಗಳನ್ನು ಸರ್ಜರಿ ಮೂಲಕ ತೆಗೆಯಲಾಯಿತು. ನಂತರ ಹೆತ್ತವರೊಂದಿಗೆ ಮಗು ಇರಾಕಿಗೆ ಹಿಂದಿರುಗಿತ್ತು. ಕೆಲವು ದಿನಗಳ ನಂತರ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಸಿ ಮತ್ತೆರಡು ಅಂಗಗಳನ್ನು ಬೇರ್ಪಡಿಸಲಾಯಿತು.

ಕರಮ್‍ನ ಎಡಗಾಲು ಸಮರ್ಪಕವಾಗಿ ಬೆಳವಣಿಗೆ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರು ಇನ್ನೊಂದು ಶಸ್ತ್ರಕ್ರಿಯೆ ನಡೆಸಿದರು. ಈ ಹಿಂದೆ ಮಗುವಿನ ದೇಹದಿಂದ ಬೇರ್ಪಡಿಸಿದ್ದ ಅಂಗಾಂಗಗಳ ಸ್ನಾಯುಗಳನ್ನು ಬಳಸಿ ಎಡಗಾಲಿಗೆ ಕಸಿ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin