ಕಾಳಧನದ ಪ್ರಕರಣಗಳ ತನಿಖೆಗೆ ಸಿಬಿಐಗೆ ಸಿಕ್ತು ಹೊಸ ಆನ್‍ಲೈನ್ ತಂತ್ರಜ್ಞಾನ

ಈ ಸುದ್ದಿಯನ್ನು ಶೇರ್ ಮಾಡಿ

CBI--01

ನವದೆಹಲಿ, ಏ.16- ಕಾಳಧನ ಮತ್ತು ಅಕ್ರಮ ಸಂಪತ್ತು ಗಳಿಕೆ ಪ್ರಕರಣಗಳ ತನಿಖೆ ಕೈಗೊಂಡಿರುವ ಕೇಂದ್ರೀಯ ತನಿಖಾ ದಳ-ಸಿಬಿಐಗೆ ಹೊಸ ಆನ್‍ಲೈನ್ ವ್ಯವಸ್ಥೆಯೊಂದು ನೆರವಾಗಲಿದೆ. ದೇಶಾದ್ಯಂತ ಕಪ್ಪು ಹಣ ಮತ್ತು ಅಕ್ರಮ ಆಸ್ತಿಗಳ ವಿರುದ್ಧ ಕಾರ್ಯಾಚರಣೆ ಬಿರುಸುಗೊಂಡಿರುವಾಗಲೇ ಸಿಬಿಐ ಬತ್ತಳಿಕೆಗೆ ಅತ್ಯಾಧುನಿಕ ತಂತ್ರಜ್ಞಾನದ ಆಸ್ತ್ರವೊಂದು ಸೇರ್ಪಡೆಗೊಳ್ಳಲಿದೆ.  ಆಪರೇಷನ್ ಕ್ಲೀನ್ ಮನಿ-2 ಕಾರ್ಯಾಚರಣೆಯನ್ನು ಆದಾಯ ತೆರಿಗೆ ರಾಷ್ಟ್ರವ್ಯಾಪಿ ಕೈಗೊಂಡಿರುವ ಸಂದರ್ಭದಲ್ಲಿ ತನಿಖೆಗೆ ಆನ್‍ಲೈನ್ ಸಿಸ್ಟಮ್ ಸಿಬಿಐಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.ಬ್ಯಾಂಕುಗಳು, ಆದಾಯ ತೆರಿಗೆ (ಐಟಿ) ಇಲಾಖೆ ಹಾಗೂ ಆರ್ಥಿಕ ಗುಪ್ತಚರ ಘಟಕ (ಎಫ್‍ಐಯು) ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸಂಗ್ರಹಿಸಲಾದ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ತಾಳೆ ನೋಡಲು ಸಿಬಿಐ ಅಧಿಕಾರಿಗಳಿಗೆ ಈ ನೂತನ ವ್ಯವಸ್ಥೆ ಸಹಕಾರಿಯಾಗಲಿದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಸಿಬಿಐ ಮೇಲೆ ಉಸ್ತವಾರಿ ಹೊಂದಿರುವ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಮೂಲಕ ರಚಿಸಲಾದ ಬಹು ಉದ್ದೇಶಿತ ಸಮಿತಿಯು ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುವಂತೆ ನೀಡಿರುವ ಸಲಹೆಗಳ ಹಿನ್ನೆಲೆಯಲ್ಲಿ ಹೊಸ ಪರಿಕಲ್ಪನೆಯ ನವೀನ ಆನ್‍ಲೈನ್ ವ್ಯವಸ್ಥೆ ಸಿದ್ದಗೊಂಡಿದೆ.

ಆದಾಯ ಮೀರಿದ ಆಸ್ತಿ ಗಳಿಕೆಯನ್ನು ಮೌಲ್ಯಮಾಪನ ಮಾಡಲು ರೂಪಿಸಲಾದ ಈಗಿನ ವಿಧಾನವನ್ನು ರೂಪಿಸಿ ಹಲವಾರು ವರ್ಷಗಳಾಗಿವೆ. ಹೀಗಾಗಿ ಮುಂದುವರಿದ ತಂತ್ರಜ್ಞಾನಕ್ಕೆ ಅನುಗುಣವಾಗಿ ಹೊಸ ವ್ಯವಸ್ಥೆಯತ್ತ ಸಿಬಿಐ ಹೊರಳಲಿದೆ.  ಕಳೆದ ವರ್ಷ ಸಿಬಿಐನಿಂದ 673 ಪ್ರಕರಣಗಳು ದಾಖಲಾಗಿದ್ದು, 1,300ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಇದರಲ್ಲಿ ಷಾಮೀಲಾಗಿರುವುದು ಬೆಳಕಿಗೆ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin