ಬಾಲಕನ ಅಪಹರಣ ಸುಖಾಂತ್ಯ, ದೆಹಲಿ ಬಳಿ ಬಾಲಕ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Crime--012

ಬೆಂಗಳೂರು, ಏ.16- ಮೂರು ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ರೆಹಮತ್ ಎಂಬುವರ ಮೇಲಿನ ದ್ವೇಷಕ್ಕೆ ಮನೆ ಸಮೀಪವಿದ್ದ ಮೂಲತಃ ಇವರ ಊರಿನವರೇ ಆದ ಆರೋಪಿ ಸಂಶಾದ್ ಅಲಿ ಎಂಬಾತ ರೆಹಮತ್ ಅವರ ಮೂರು ವರ್ಷದ ಎಯತೇಶ್‍ನನ್ನು ಅಪಹರಿಸಿ ಉತ್ತರ ಪ್ರದೇಶಕ್ಕೆ ಹೋಗಲು ನಿರ್ಧರಿಸಿ ದೆಹಲಿಗೆ ತೆರಳಿದ್ದನು. ಇತ್ತ ಮಗು ನಾಪತ್ತೆಯಾದ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ದೆಹಲಿಯಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಹೆಣ್ಣೂರು ಪೊಲೀಸರು ದೆಹಲಿಗೆ ತೆರಳಿ ಅಲ್ಲಿನ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಗೆ ಮುಂದಾದರು.

ಈ ವೇಳೆ ದೆಹಲಿ ಹೊರವಲಯದ ಬಳಿ ಆರೋಪಿ ಇರುವ ಬಗ್ಗೆ ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಮಗು ಪತ್ತೆಯಾಗಿದೆ. ಪೊಲೀಸರ ಜತೆ ತೆರಳಿದ್ದ ಬಾಲಕನ ತಂದೆಗೆ ಮಗುವನ್ನು ಒಪ್ಪಿಸಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಹೆಣ್ಣೂರು ಪೊಲೀಸರು ಹಾಗೂ ಬಾಲಕನ ತಂದೆ ನಾಳೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin