ಸೈಡ್ ಬಿಡದ ಬಿಎಂಟಿಸಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Peppr-Spray--01

ಬೆಂಗಳೂರು, ಏ.16– ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ತಮಗೆ ಸೈಡ್ ಬಿಡಲಿಲ್ಲವೆಂದು ಕೋಪಗೊಂಡ ಬೈಕ್ ಸವಾರರು ಚಾಲಕನಿಗೆ ಪೆಪ್ಪರ್‍ಸ್ಪ್ರೇ ಮಾಡಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಬಿಇಎಲ್ ಸರ್ಕಲ್ ಬಳಿ ಬಿಎಂಟಿಸಿ ಬಸನ್ನು ಚಾಲಕ ಪದ್ಮನಾಭ(32) ಎಂಬುವರು ಚಲಾಯಿಸುತ್ತಿದ್ದರು.  ಈ ವೇಳೆ ಹಿಂದಿನಿಂದ ಹೊಂಡಾ ಆ್ಯಕ್ಟೀವ್ ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರು ಸವಾರರು ತಮಗೆ ಸೈಡ್ ಬಿಡುತ್ತಿಲ್ಲವೆಂದು ಚಾಲಕನ ಜೊತೆ ಜಗಳವಾಡಿ ಪೆಪ್ಪರ್‍ಸ್ಪ್ರೇ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪದ್ಮನಾಭ ಜಾಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin