ಎಟಿಎಂಗೆ ಹಣ ತುಂಬುವಾಗ ವ್ಯಾನ್‍ನಲ್ಲಿದ್ದ 27ಲಕ್ಷದ ಹಣದ ಪೆಟ್ಟಿಗೆ ಕದ್ದೊಯ್ದ ಖದೀಮರು..!

ಈ ಸುದ್ದಿಯನ್ನು ಶೇರ್ ಮಾಡಿ

Delhi-Pli,-e

ನವದೆಹಲಿ, ಏ. 17- ಎಟಿಎಂ ಗಳಿಗೆ ಹಣ ತುಂಬುವ ವ್ಯಾನ್ ಒಂದರ ಸಿಬ್ಬಂದಿ ಎಟಿಎಂ ಗೆ ಹಣ ಹಾಕುವ ಸಂದರ್ಭ ವಾಹನದ ಡೋರ್ ತೆರೆದು ಹಾಗೇ ಬಿಟ್ಟಿದ್ದು, ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೂವರು ಬೈಕ್ ಸವಾರರು ವ್ಯಾನ್‍ನದಲ್ಲಿ 27 ಲಕ್ಷ ರೂ ಹಣವಿದ್ದ ಒಂದು ಪೆಟ್ಟಿಗೆ(ಬಾಕ್ಸ್)ಯನ್ನು ಹೊತ್ತೊಯ್ದಿರುವ ಘಟನೆ ಮಧ್ಯ ದೆಹಲಿಯ ರಾಜೀಂದರ್‍ನಗರದಲ್ಲಿ ನಡೆದಿದೆ.ಇದೇನು ಉದ್ದೇಶ ಪೂರಕವೋ ಅಥವಾ ಆಕಸ್ಮಿಕವೋ ಎಂಬ ಬಗ್ಗೆ ಪೊಲೀಸರು ಗೊಂದಲದಲ್ಲಿದ್ದು ತನಿಖೆ ಮುಮದುವರಿಸಿದ್ದಾರೆ. ನಾನು ಒಬ್ಬ ಸೆಕ್ಯೂರಿಟಿಯೊಂದಿಗೆ ಎಟಿಎಂ ಗೆ ಹಣ ತುಂಲು ಹೋಗಿದ್ದೆ. ಆ ವೇಳೆ ವ್ಯಾ ನ್ ಬಳಿ ನನ್ನ ಸಹೋದ್ಯೋಗಿಗಳಾದ ಮೊಹಮ್ಮದ್ ನದೀಮ್ ಮತ್ತು ಗೌರವ್ ಇದ್ದರು. ಹಿಂದಿನ ಬಾಗಿಲನ್ನು ಲಾಕ್ ಮಾಡಿರಲಿಲ್ಲ. ಚಾಲಕ ಸಂಜಯ್ ಕೂಡ ವ್ಯಾನ್‍ನಿಂದ ಕೆಳಗಿಳಿದಿದ್ದ. ಆಗ ಮೂವರು ವಾಹನದ ಹಿಂಭಾಗದಲ್ಲಿ ಬಂದು ನಿಂತಿದ್ದರು. ನಾನು ಹೊರ ಬರುವಷ್ಟರಲ್ಲಿ ಆ ಮೂವರೂ ವ್ಯಾನ್ ಒಳಕ್ಕೆ ಪ್ರವೇಶಿಸಿ ಹಣದ ಪೆಟ್ಟಿಗೆ ಹೊತ್ತೊಯ್ದಿದ್ದಾರೆ ಎಂದು ಮುಖ್ಯ ಭದ್ರತಾ ಸಿಬ್ಬಂದಿ ಜಿತೇಂದರ್ ಸಿಂಗ್ ಹೇಳಿದ್ದಾನೆ.

ನಾವಿಬ್ಬರೂ ತುಂಬ ಸೀರಿಯಸ್ ಆಗಿ ಮಾತನಾಡುವುದರಲ್ಲಿ ಮಗ್ನರಾಗಿದ್ದೆವು. ಹಾಗಾಗಿ ಆ ಆಗಂತುಕರನ್ನು ನಾವು ಗಮನಿಸಲಿಲ್ಲ ಎಂದು ನದೀಮ್ ಮತ್ತು ಗೌರವ್ ಹೇಳಿದ್ದಾರೆ. ಕೆಲ ಸಮಯದ ಬಳಿಕ ನನಗೆ ಹಣದ ಪೆಟ್ಟಿಗೆ ಇಲ್ಲದಿರುವುದು ಗಮನಕ್ಕೆ ಬಂದು ಸೈರನ್ ಮೊಳಗಿಸಿದೆ. ಸ್ಥಳಕ್ಕೆ ಪೆÇಲೀಸರು ಬಂದರು ಎಂದು ನದೀಮ್ ತಿಳಿಸಿದ್ದಾನೆ. ಸದ್ಯ ಪೊಲೀಸರು ಅಲ್ಲಿರುವ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin