ಏಪ್ರಿಲ್ ಅಂತ್ಯದವರೆಗೂ ಮುಂಗಾರು ಪೂರ್ವ ಮಳೆ ಸುರಿಯುವ ಸಂಭವ

ಈ ಸುದ್ದಿಯನ್ನು ಶೇರ್ ಮಾಡಿ

Rain-Karnataka

ಬೆಂಗಳೂರು, ಏ.17-ರಾಜ್ಯದ ಒಳನಾಡಿನ ಹಲವು ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾದ ವರದಿಯಾಗಿದ್ದು, ಈ ತಿಂಗಳ ಅಂತ್ಯದವರೆಗೂ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.  ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದರೂ ಅದರ ಪರಿಣಾಮ ರಾಜ್ಯದ ಮೇಲೆ ಆಗುತ್ತಿಲ್ಲ. ಈಗ ಬೀಳುತ್ತಿರುವ ಮಳೆ ಬೇಸಿಗೆ ಮಳೆಯೇ ಹೊರತು ಚಂಡಮಾರುತದ ಮಳೆಯಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.



ಚಂಡಮಾರುತವು ಮ್ಯಾನ್‍ಮಾರ್, ಬರ್ಮಾ ಕಡೆಗೆ ಚಲಿಸುತ್ತಿದ್ದು,ತಮಿಳುನಾಡಿನ ಕರಾವಳಿಗೂ ಅದರ ಪರಿಣಾಮ ಉಂಟಾಗುವ ಸಾಧ್ಯತೆ ವಿರಳ.
ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸ್ಥಳೀಯವಾಗಿ ಉಂಟಾಗುವ ಹವಾಮಾನ ಬದಲಾವಣೆಯಿಂದಾಗಿ ಏಪ್ರಿಲ್ ಅಂತ್ಯದವರೆಗೂ ಒಳನಾಡಿನ ಹಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗುವ ಲಕ್ಷಣಗಳಿವೆ ಎಂದು ಅವರು ಹೇಳಿದರು.

ಅರಬ್ಬೀ ಸಮುದ್ರದಲ್ಲಿ ಸಣ್ಣಪ್ರಮಾಣದ ವಾಯುಭಾರ ಕುಸಿತ ಉಂಟಾಗಿದ್ದರೂ, ರಾಜ್ಯದ ಮೇಲೆ ಅದರ ಪರಿಣಾಮ ಉಂಟಾಗುತ್ತಿಲ್ಲ. ಕರಾವಳಿ ತೀರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.   ವಾಯುಭಾರ ಕುಸಿತದಿಂದ ಮಳೆ ಬಂದರೂ ಕೂಡ ಬಹುತೇಕ ಸಮುದ್ರದ ಮೇಲೆಯೇ ಹೆಚ್ಚಿನ ಮಳೆಯಾಗಲಿದೆ. ರಾಜ್ಯದ ಒಳನಾಡಿನ ಮೇಲೆ ಚಂಡಮಾರುತ ಇಲ್ಲವೆ, ವಾಯುಭಾರ ಕುಸಿತದ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin