ಪುಣೆ ವಿರುದ್ಧದ ಸೋಲು ನಮ್ಮ ತಂಡದ ಕಳಪೆ ಪ್ರದರ್ಶನವನ್ನು ಎತ್ತಿ ತೋರಿಸುತ್ತಿದೆ : ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Kohli--01

ಬೆಂಗಳೂರು, ಏ.17- ಘಟಾನುಘಟಿ ಬ್ಯಾಟ್ಸ್ ಮೆನ್ ಗಳು , ಸ್ಪೆಷಾಲಿಸ್ಟ್ ಬೌಲರ್‍ಗಳನ್ನು ಒಳಗೊಂಡಿದ್ದರೂ ಕೂಡ ಕಳಪೆ ಪ್ರದರ್ಶನದಿಂದ ಪುಣೆ ವಿರುದ್ಧ ಸೋಲು ಕಂಡಿರುವುದರಿಂದ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ವಿಚಲಿತಗೊಂಡಿದ್ದಾರೆ. ನಮ್ಮ ತಂಡ ಕಳೆದ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನದಿಂದ ಆರಂಭದ 4 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಫೈನಲ್‍ವರೆಗೂ ತಲುಪಿ ತಂಡದ ಫ್ರಾಂಚೈಸಿಗಳು ಹಾಗೂ ಅಭಿಮಾನಿಗಳನ್ನು ಸಂತೋಷದ ಅಲೆಯಲ್ಲಿ ತೇಲುವಂತೆ ಮಾಡಿದ್ದೆವು. ಆದರೆ ಈ ಬಾರಿ ಆರ್‍ಸಿಬಿ ತಂಡದ ಆಡಿರುವ ಆರಂಭಿಕ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳ ಮಟ್ಟಕ್ಕೆ ಕುಸಿದು ಬಿದ್ದಿದೆ.


ನಿನ್ನೆ ಪುಣೆ ವಿರುದ್ಧವೂ ಕೂಡ 134 ರನ್‍ಗಳಿಸಿ 27 ರನ್‍ಗಳಿಂದ ಸೋಲು ಕಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್, ನಾವು ಮುಂಬೈ ವಿರುದ್ಧ ಸೋತರೂ ಕೂಡ ಹೋರಾಟದ ಮನೋಭಾವವನ್ನು ತೋರಿಸಿದ್ದೆವು. ಆದರೆ ಪುಣೆ ವಿರುದ್ಧದ ಸೋಲು ನಮ್ಮ ತಂಡದ ಕಳಪೆ ಪ್ರದರ್ಶನವನ್ನು ಎತ್ತಿ ತೋರಿಸುವಂತಿತ್ತು ಎಂದರು. ನಾವು ನಮ್ಮ ತಂಡದ ಫ್ರಾಂಚೈಸಿಗಳು ಹಾಗೂ ತವರಿನ ಅಭಿಮಾನಿಗಳ ಎದುರು ಆಡುತ್ತಿದ್ದರೂ ಕೂಡ ತವರು ನೆಲದಲ್ಲಿ ಆಡಿರುವ 2 ಪಂದ್ಯಗಳನ್ನು ಸೋತಿರುವುದು ಬೇಸರ ತಂದಿದೆಯಾದರೂ ಆದಷ್ಟು ಬೇಗ ನಾವು ಗೆಲ್ಲುವ ತಂತ್ರವನ್ನು ಅಳವಡಿಸಿಕೊಳ್ಳಲಿದ್ದೇವೆ ಎಂದು ವಿರಾಟ್ ಕೊಹ್ಲಿ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin