ಬಿಬಿಎಂಪಿ ಆಸ್ಪತ್ರೆಗಳು ಮೇಲ್ದರ್ಜೆಗೆ

ಈ ಸುದ್ದಿಯನ್ನು ಶೇರ್ ಮಾಡಿ

BBMP-Padm

ಬೆಂಗಳೂರು,ಏ.17- ಬಿಬಿಎಂಪಿ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ಔಷಧೋಪಚಾರ ಸಿಗುವಂತೆ ಆಧುನೀಕರಿಸಲಾಗುತ್ತಿದೆ ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ತಿಳಿಸಿದರು.ಲಕ್ಷ್ಮೀದೇವಿನಗರ ವಾರ್ಡ್‍ನಲ್ಲಿ 61 ಲಕ್ಷ ರೂ. ವೆಚ್ಚದಲ್ಲಿ ಪುನರ್ ನವೀಕರಿಸಿರುವ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಈ ಹಿಂದೆ ಶಿಥಿಲಗೊಂಡಿದ್ದ ಆಸ್ಪತ್ರೆಯನ್ನು 61 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆಳ ಅಂತಸ್ತಿನಲ್ಲಿನ 15 ಹಾಸಿಗೆಯ ಹೆರಿಗೆ ಆಸ್ಪತ್ರೆ ಹಾಗೂ ಮೊದಲನೇ ಮಹಡಿಯಲ್ಲಿ ಡಯಾಲೀಸಿಸ್ ಕೇಂದ್ರ ತೆರೆಯಲಾಗಿದೆ ಎಂದರು.ನರ್ಮ್ ಯೋಜನೆಯಡಿ ನಗರದ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ಕೋಟ್ಯಂತರ ರೂ.ಗಳ ಅನುದಾನ ಬಂದಿದೆ. ಈ ಅನುದಾನ ಸದ್ಬಳಕೆ ಮಾಡಿಕೊಂಡು ಎಲ್ಲಾ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.ಲಕ್ಷ್ಮೀದೇವಿನಗರದ ಕೊಳಗೇರಿ ನಿವಾಸಿಗಳಿಗೆ ಈ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲಾಗುವುದು. ಜನನಿ ಸುರಕ್ಷೆ, ಮಡಿಲು ಮತ್ತಿತರ ಯೋಜನೆಗಳ ಸೌಲಭ್ಯವನ್ನು ನಾಗರಿಕರು ಪಡೆದುಕೊಳ್ಳಬಹುದಾಗಿದೆ ಎಂದರು. ಮಧುಮೇಹ, ಬಿಪಿ, ಕಿಡ್ನಿ ವೈಫಲ್ಯವಿರುವ ನಾಗರಿಕರು ಬಿಬಿಎಂಪಿ ಆಸ್ಪತ್ರೆಯಲ್ಲಿ ಲಭ್ಯವಿರುವ ಡಯಾಲಿಸೀಸ್ ಮತ್ತಿತರ ಪರೀಕ್ಷೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಪದ್ಮಾವತಿ ಮನವಿ ಮಾಡಿಕೊಂಡರು.ಶಾಸಕ ಮುನಿರತ್ನ, ಸ್ಥಳೀಯ ಬಿಬಿಎಂಪಿ ಸದಸ್ಯರು ಹಾಗೂ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin