1000 ವೆಚ್ಚದಲ್ಲಿ ಮೂಡಿಬರಲಿದೆ ‘ಮಹಾಭಾರತ’, ಹಣ ಹೂಡಲಿದ್ದಾರೆ ಯುಎಇ ಕನ್ನಡಿಗ..!

ಈ ಸುದ್ದಿಯನ್ನು ಶೇರ್ ಮಾಡಿ

Mahabharat-01

ಕೊಚ್ಚಿ .ಏ.17- ಭಾರತದ ಐತಿಹಾಸಿಕ ಪುರಾಣಗಳಲ್ಲಿ ಒಂದಾದ ‘ಮಹಾಭಾರತ’ ಹೆಸರಿನ ಸಿನಿಮಾ ತಯಾರಿಕೆಗಾಗಿ ಭಾರತೀಯ ಮೂಲದ ಯುಎಇ  ಉದ್ಯಮಿ ಕನ್ನಡಿಗ  ಬಿ .ಆರ್ ಶೆಟ್ಟಿ   ಬರೋಬ್ಬರಿ 1000 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದಾರೆ . ಹೌದು, 1000 ಕೋಟಿ ವೆಚ್ಚದಲ್ಲಿ ‘ಮಹಾಭಾರತ’ವೆಂಬ ಮಹಾ ದೃಶ್ಯಕಾವ್ಯ ತೆರೆ ಮೇಲೆ ಅದ್ದೂರಿಯಾಗಿ ಮೂಡಿಬರಲಿದೆ.ಜಾಹಿರಾತು ಸಿನಿಮಾ ತಯಾರಕ ವಿ.ಎಸ್ .ಶ್ರೀ ಕುಮಾರ್  ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ,2018 ರ ವೇಳೆಗೆ ಮಹಾಭಾರತ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದೆ .2020 ಕ್ಕೆ ಈ ಚಿತ್ರದ ಮೊದಲ ಭಾಗ  ಬಿಡುಗಡೆಗೊಳ್ಳಲಿದೆ . ಮೊದಲನೇ ಭಾಗ ಬಿಡುಗಡೆಯ 90 ದಿನಗಳ ನಂತರ ಮಹಾಭಾರತ ಭಾಗ -2 ಬಿಡುಗಡೆಯಾಗಲಿದೆ .  ಈ ಸಿನೆಮಾವನ್ನು ಭಾರತೀಯ ಭಾಷೆಗಳಾದ   ಹಿಂದಿ , ,ಮಲಯಾಳಂ ,ಕನ್ನಡ ,ತಮಿಳ್ ,ತೆಲುಗು ಸೇರಿದಂತೆ ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಆಸ್ಕರ್ ಪ್ರಶಸ್ತಿ ವಿಜೇತ ನಟರೂ ಸೇರಿದಂತೆ, ಭಾರತೀಯ ಸಿನೆಮಾ ರಂಗದ ಮತ್ತು ಹಾಲಿವುಡ್ ಸಿನೆಮಾ ನಟರು ಕೂಡ ಈ ಸಿನೆಮಾದಲ್ಲಿ ನಟಿಸಲಿದ್ದಾರೆ.
ಇದು ಮಲಯಾಳಂನ ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ ಟಿ ವಾಸುದೇವನ್ ನಾಯರ್ ಅವರ ‘ರಂಡಮೂಳಮ್’ ಪುಸ್ತಕದ ಸಿನೆಮಾ ಅಡವಳಿಕೆ ಆಗಲಿದೆ. ಭೀಮನ ದೃಷ್ಟಿಯಿಂದ ಮಹಾಭಾರತದ ಕಥೆ ಹೇಳುವ ಈ ಪುಸ್ತಕ ಬಹಳ ಪ್ರಸಿದ್ಧ ಮತ್ತು ಕನ್ನಡಕ್ಕೆ ‘ಭೀಮಾಯಣ’ ಎಂಬ ಹೆಸರಿನಲ್ಲಿ ಅನುವಾದವಾಗಿದೆ. ಸಿನೆಮಾಗೆ ಎಂ ಟಿ ವಿ ಅವರೇ ಸ್ಕ್ರೀನ್ ಪ್ಲೆ ಬರೆಯಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin